ಕಾರವಾರ: ಹೊನ್ನಾವರದ ಉಪನೋಂದಣಾಧಿಕಾರಿಯಾಗಿ ಸೇವೆ ಸಲ್ಲಿಸಿ ಎರಡು ವರ್ಷಗಳ ಹಿಂದೆ ನಿವೃತ್ತಿಯಾಗಿದ್ದ ಕೆ.ಎಸ್.ಶಾಂತಯ್ಯ (61) ಅನಾರೋಗ್ಯದಿಂದಾಗಿ ನಿಧನರಾಗಿದ್ದಾರೆ.ಬೆಂಗಳೂರು ಗ್ರಾಮಾಂತರ ಭಾಗದ ಶಿವಗಂಗೆಯವರಾಗಿದ್ದ ಶಾಂತಯ್ಯ, ಹೆಸರಿಗೆ ತಕ್ಕಂತೆ ಶಾಂತ ಸ್ವಭಾವದವರಾಗಿದ್ದರು. ಅನಾವಶ್ಯಕ ಹೆಚ್ಚು ಮಾತನಾಡುತ್ತಲೂ ಇರಲಿಲ್ಲ.
ಹಲವು ಹುದ್ದೆಗಳಲ್ಲಿ ಹಂಗಾಮಿ ನೌಕರರಾಗಿ ಕೆಲಸ ಮಾಡಿ 1994ರಲ್ಲಿ ನೊಂದಣಿ ಅಧಿಕಾರಿಯಾಗಿ ನೇಮಕಗೊಂಡು, ಯಾರೂ ನಕಲು ಮಾಡದಂತೆ ದೀರ್ಘವಾದ ಹಲವು ಸುಳಿಗಳನ್ನೊಳಗೊಂಡು ತಮ್ಮ ಸಹಿ ಮಾಡುತ್ತಿದ್ದರು. ನೂಲು ಹಿಡಿದು ಲೆಕ್ಕಹಾಕಿದರೆ ಇವರ ಸಹಿ 2.6 ಅಡಿ ಉದ್ದ ಇರುತ್ತಿತ್ತು. ಹೀಗಾಗಿ ಇವರನ್ನ ಸಿಗ್ಬೇಚರ್ ಶಾಂತಯ್ಯ ಅಂತಲೂ ಕರೆಯುತ್ತಿದ್ದರು.
2017ರಲ್ಲಿ ಉತ್ತರಕನ್ನಡ ಜಿಲ್ಲೆಯ ಹೊನ್ನಾವರದ ಉಪನೋಂದಣಿ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಂಡು, ಎರಡು ವರ್ಷಗಳ ಹಿಂದಷ್ಟೇ ಅವರು ನಿವೃತ್ತಿಯಾಗಿದ್ದರು. ಅನಾರೋಗ್ಯದ ಕಾರಣ ತುಮಕೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ವೀರಶೈವ ಲಿಂಗಾಯತ ಸಂಪ್ರದಾಯದಂತೆ ಅವರ ಅಂತ್ಯಕ್ರಿಯೆ ನಡೆದಿದ್ದು, ನಿಧನದ ಬಳಿಕ ಅವರ ಕಣ್ಣುಗಳನ್ನು ಕುಟುಂಬಸ್ಥರು ದಾನ ಮಾಡಿ ಸಾರ್ಥಕತೆ ಮೆರೆದಿದ್ದಾರೆ.
Kshetra Samachara
09/09/2022 02:02 pm