ಹಳೆಯ ಸಿಟಿ ಸ್ಕ್ಯಾನ್ ಮೆಶಿನ್ ಇಟ್ಟುಕೊಂಡಿದ್ದಕ್ಕೆ ಆರೋಗ್ಯ ಸಚಿವ ಡಾ.ಸುಧಾಕರ್ ವೈದ್ಯಾಧಿಕಾರಿಗಳ ವಿರುದ್ಧ ಗರಂ ಆಗಿದ್ದಾರೆ.
ಕಾರವಾರದ ಜಿಲ್ಲಾ ಆಸ್ಪತ್ರೆಯಲ್ಲಿ ಪರಿಶೀಲನೆ ನಡೆಸುವ ವೇಳೆ ಸಿಟಿ ಸ್ಕ್ಯಾನ್ ವಿಭಾಗಕ್ಕೆ ತೆರಳಿದ ಸಚಿವರು, ಅಲ್ಲಿ ಸ್ಕ್ಯಾನಿಂಗ್ ಮೆಶಿನ್ ಪರಿಶೀಲಿಸಿದ್ದಾರೆ. ಈ ವೇಳೆ ಹೊಸ ಮೆಶಿನ್ ಇದ್ದರೂ ಹಳೆಯ ಮೆಶಿನ್ ಅನ್ನು ಬಳಸುತ್ತಿರುವುದು ಗಮನಕ್ಕೆ ಬಂದಿದೆ.
ಹೊಸ ಮೆಶಿನ್ ಯಾಕೆ ಇನ್ನೂ ಅಳವಡಿಸಿಲ್ಲ ಎಂದು ವೈದ್ಯಾಧಿಕಾರಿಗಳನ್ನ ಪ್ರಶ್ನಿಸಿದ ಡಾ.ಸುಧಾಕರ್, ತರಾಟೆಗೆ ತೆಗೆದುಕೊಂಡಿದ್ದಾರೆ. ಶೀಘ್ರದಲ್ಲಿ ಹೊಸ ಮೆಶಿನ್ ಅಳವಡಿಸಿ ಸಾರ್ವಜನಿಕರಿಗೆ ಲಭ್ಯವಾಗುವಂತೆ ನೋಡಿಕೊಳ್ಳಲು ಸೂಚನೆ ನೀಡಿದ್ದಾರೆ.
PublicNext
11/10/2022 03:34 pm