ಕಾರವಾರ (ಉತ್ತರಕನ್ನಡ): ಪಶುಪಾಲನಾ ಹಾಗೂ ಪಶು ವೈದ್ಯಕೀಯ ಸೇವಾ ಇಲಾಖೆಯ ಕೇಂದ್ರ ಪುರಸ್ಕೃತ ಯೋಜನೆಯಡಿ ಹೊನ್ನಾವರಕ್ಕೆ ನೀಡಲಾದ 'ಸಂಚಾರಿ ತುರ್ತು ಚಿಕಿತ್ಸಾ ವಾಹನ' ಕಳೆದ ಮೂರು ತಿಂಗಳಿನಿಂದಲೂ ಸಂಚರಿಸದೇ ನಿಂತಲ್ಲೇ ನಿಂತಿದೆ!
ಈ ಬಗ್ಗೆ ಕರವೇ ಅಧ್ಯಕ್ಷ ಮಂಜುನಾಥ ಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ಮೂರು ತಿಂಗಳ ಹಿಂದೆ ಆಗಮಿಸಿದ ವಾಹನಕ್ಕೆ ಚಾಲಕರ ನಿಯೋಜನೆ ಮಾಡಲು ಸಾಧ್ಯವಾಗಿಲ್ಲ ಎಂದಾದರೆ ಸರ್ಕಾರ ಏನು ಮಾಡುತ್ತಿದೆ? ಗೋವಿನ ಹೆಸರಿನಲ್ಲಿಯೂ ರಾಜಕಾರಣ ಮಾಡಿ ಇಂತಹ ವಾಹನ ಖರೀದಿಸಿ ಭ್ರಷ್ಚಚಾರ ಮಾಡಲು ಜನಪ್ರತಿನಿಧಿಗಳು, ಅಧಿಕಾರಿಗಳು ಮುಂದಾದರಾ ಎನ್ನುವ ಪ್ರಶ್ನೆ ಕಾಡುತ್ತಿದೆ. ಚಾಲಕರ ನಿಯೋಜನೆ ಮಾಡಲು ಸಾಧ್ಯವಾಗಿಲ್ಲ ಎಂದಾದರೆ ಈ ವಾಹನ ವಾಪಸ್ಸು ತೆಗೆದುಕೊಂಡು ಹೋಗಿ. ಜನರ ತೆರಿಗೆ ಹಣ ಪೊಲಾಗುವುದು ಬೇಡ ಎಂದಿದ್ದಾರೆ.
PublicNext
22/09/2022 11:03 am