ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರವಾರ: ಕರಾವಳಿಯಿಂದ ಕಾಶ್ಮೀರಕ್ಕೆ ಯುವಕರಿಬ್ಬರ ಸೈಕ್ಲಿಂಗ್ ಯಾತ್ರೆ!

ಕಾರವಾರ (ಉತ್ತರಕನ್ನಡ): ರಾಷ್ಟ್ರದ ಯುವಜನತೆಗೆ ಪರಿಸರ ಸಂರಕ್ಷಣೆ, ಆರೋಗ್ಯದ ಅವಶ್ಯಕತೆ ಮತ್ತು ಅಂಗಾಂಗ ದಾನದ ಮಹತ್ವಗಳ ಬಗ್ಗೆ ಅರಿವು ಮೂಡಿಸಲು ಮಂಗಳೂರಿನಿಂದ ಕಾಶ್ಮೀರದವರೆಗೆ ಸೈಕ್ಲಿಂಗ್ ಯಾತ್ರೆ ಕೈಗೊಂಡಿರುವ ಇಬ್ಬರು ಯುವಕರಿಗೆ ಭಟ್ಕಳ ಪಟ್ಟಣದ ಸಂಶುದ್ದೀನ್ ಸರ್ಕಲ್‌ನಲ್ಲಿ ಬಿಜೆಪಿ ಮಂಡಲ ಹಾಗೂ ಸಂಘ- ಸಂಸ್ಥೆಗಳಿಂದ ಗುಲಾಬಿ ಹೂ ನೀಡಿ ಭವ್ಯ ಸ್ವಾಗತ ಕೋರಲಾಯಿತು.

ಶ್ರೀನಿಧಿ ಶೆಟ್ಟಿ ಹಾಗೂ ಜಗದೀಶ ಸೈಕಲ್ ಯಾತ್ರೆ ಹೊರಟವರಾಗಿದ್ದಾರೆ. ಇಬ್ಬರು ಯುವಕರು ಮೂಲತಃ ಮಂಗಳೂರಿನ ಬೆಳ್ತಂಗಡಿಯವರಾಗಿದ್ದಾರೆ. ತಮ್ಮ ಯಾತ್ರೆಯಲ್ಲಿ 10 ರಾಜ್ಯಗಳ ಒಟ್ಟು 3,500 ಕಿ.ಮೀ. ದೂರವನ್ನು ಸೈಕಲ್‌ನಲ್ಲಿ ಕ್ರಮಿಸಿ, ಅ.25ರಂದು ಕಾಶ್ಮೀರ ತಲುಪುವ ಗುರಿ ಹಾಕಿಕೊಂಡಿದ್ದಾರೆ. 30ರಂದು ಕಾಶ್ಮೀರದ ಲಾಲ್ ಚೌಕ್ ಮತ್ತು ಕಾರ್ಗಿಲ್ ಪ್ರದೇಶದಲ್ಲಿ ಈ ಯಾತ್ರೆ ಸಂಪನ್ನಗೊಳ್ಳಲಿದೆ. ಎರಡು ದಿನಗಳ ಹಿಂದಷ್ಟೇ ಬೆಳ್ತಂಗಡಿ ಕುತ್ಯಾರ ದೇವಸ್ಥಾನದಿಂದ ಆರಂಭಗೊಂಡ ಈ ಸೈಕಲ್ ಯಾತ್ರೆ, ಸದ್ಯ ಭಟ್ಕಳದಿಂದ ಮುಂದಕ್ಕೆ ಸಾಗಿದೆ.

ಇತ್ತೀಚ್ಚಿನ ದಿನಗಳಲ್ಲಿ ಯುವಜನತೆ ಸೈಕಲನ್ನು ಮರೆತೆ ಹೋಗಿರುವ ಸಂದರ್ಭದಲ್ಲಿ ಈ ಇಬ್ಬರು ಯುವಕರು ಸೈಕಲ್‌ನಲ್ಲಿಯೇ ಕಾಶ್ಮೀರದ ತನಕ ಯಾತ್ರೆ ಮಾಡುತ್ತಿರುವುದಕ್ಕೆ ಸಾರ್ವಜನಿಕರಿಂದಲೂ ಶ್ಲಾಘನೆ ವ್ಯಕ್ತವಾಗಿದೆ. ಈ ಯುವಕರಿಗೆ ಯಾವುದೇ ರೀತಿ ತೊಂದರೆಯಾಗದೆ ತಮ್ಮ ಯಾತ್ರೆಯನ್ನು ಯಶಸ್ವಿಯಾಗಿ ಮುಗಿಸಲೆಂದು ಕೂಡ ಜನತೆ ಶುಭ ಹಾರೈಸಿದ್ದಾರೆ.

Edited By : Manjunath H D
PublicNext

PublicNext

04/10/2022 09:22 pm

Cinque Terre

35.58 K

Cinque Terre

0