ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿರಸಿ: ಪಂಡಿತ ಸಾರ್ವಜನಿಕ ಆಸ್ಪತ್ರೆ‌ ಇದೆ ವಾಹನ ಸವಾರರೇ ಎಚ್ಚರ?

ಶಿರಸಿ: ನಗರದ ಪಂಡಿತ ಸಾರ್ವಜನಿಕ ಆಸ್ಪತ್ರೆ ಜಿಲ್ಲೆಯ ಬೇರೆ ಆಸ್ಪತ್ರೆಗೆ ಹೋಲಿಸಿದರೆ ನಂಬರ್‌ 1 ಆಸ್ಪತ್ರೆ ಎಂದು ಇಲ್ಲಿಗೆ ಬಂದ ಎಲ್ಲಾ ತರದ ರೋಗಿಗಳು, ಸಾರ್ವಜನಿಕರು ಹೇಳುತ್ತಾರೆ. ಅದೇ ರೀತಿ ಆಸ್ಪತ್ರೆಯ ಸ್ವಚ್ಛತೆ, ವೈದ್ಯರ ಮತ್ತು ಸಿಬ್ಬಂದಿಯ ಕಾರ್ಯವೈಖರಿಯನ್ನು ಪ್ರತಿಯೊಂದರಲ್ಲೂ ವಾಡಿಕೆಯ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರೆ ತಪ್ಪಾಗಲಾರದು. ಸಣ್ಣ ಪುಟ್ಟ ನ್ಯೂನ್ಯತೆಗಳು ಆಸ್ಪತ್ರೆಯಲ್ಲಿದ್ದರೂ ಕೂಡ ಅವುಗಳನ್ನು ನಿಭಾಯಿಸುತ್ತಿರುವ ಪಂಡಿತ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ನೇತ್ರಾವತಿ ಶಿರ್ಶಿಕರ.

ಆದರೆ ಏನು ಮಾಡುವುದು ಇಂತ ಒಂದು ಹೆಗ್ಗಳಿಕೆಯ ಆಸ್ಪತ್ರೆಗೆ ಶಿರಸಿ ನಗರ. ಶಿರಸಿ ಗ್ರಾಮೀಣ, ಹಾನಗಲ್, ಸೊರಬ, ಸಿದ್ದಾಪುರ ನಗರ ಮತ್ತು ಗ್ರಾಮಾಂತರ ಪ್ರದೇಶಗಳಿಂದ ರೋಗಿಗಳು, ಬಾಣಂತಿಯರು, ಅಂಗವಿಕಲರು, ವೃದ್ಧರು ಮತ್ತು ಸಾರ್ವಜನಿಕರು ದಿನಾಲೂ ಸಾವಿರಾರು ಸಂಖ್ಯೆಯಲ್ಲಿ ತಮ್ನ ಆರೋಗ್ಯ ತಪಾಷಣೆಗೆಂದು ಬರುತ್ತಾರೆ. ಅಂತ ಒಂದು ಸುಂದರ ಆಸ್ಪತ್ರೆಯ ಕಟ್ಟಡದ ಮುಂದೆ ಕಳೆದ ಎರಡು ವರ್ಷಗಳಿಂದ ವಾಹನ ಸವಾರರಿಗೆ ,ಆಸ್ಪತ್ರೆಯ ಸಿಬ್ಬಂಧಿಗಳಿಗೆ ಆಸ್ಪತ್ರೆಗೆ ಹೋಗಲು, ಬರಲು ಸರಿಯಾದ ರಸ್ತೆಯಿಲ್ಲ ರಸ್ತೆಯಿದ್ದರೂ ಅದು ಎರಿಳಿತದ ಸ್ಥಿತಿಯಲ್ಲಿದೆ. ಈಗಾಗಲೇ ಸುಮಾರು ಜನ ವೃದ್ದರು,ರೋಗಿಗಳು, ಬಾಣಂತಿಯರು ಬಿದ್ದು ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ಅಲ್ಲಿನ ಸಾರ್ವಜನಿಕ ವಲಯದಲ್ಲಿ‌ ಕೇಳಿ ಬಂದಿದೆ. ಮತ್ತು ಇನ್ನೊಂದು ಕಡೆ ಆಸ್ಪತ್ರೆಯ ಕಟ್ಟಡ ನಿರ್ಮಾಣ ಹಂತದಲ್ಲಿದೆ. ಆಸ್ಪತ್ರೆಯ ಸುತ್ತಮುತ್ತ ದೂಳು ‌ತುಂಬಿದ ಆಸ್ಪತ್ರೆಯ ಸುತ್ತಮುತ್ತಲಿನ ಸ್ಥಳಗಳಿಗೆ ನೀರು ಸಿಂಪಡಿಸುವ ಯಾವುದೇ ಕಾರ್ಯ ನಡೆಯುತ್ತಿಲ್ಲ. ಇದರಿಂದ ಸಾರ್ವಜನಿಕರಿಗೆ, ರೋಗಿಗಳಿಗೆ, ಅಸ್ಮಮಾ‌ ಬರುವ ಸಾಧ್ಯತೆ ಉಂಟು. ಆದ ಕಾರಣ ಇದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳ, ಜನಪ್ರತಿನಿಧಿಗಳ, ಕಟ್ಟಡ ನಿರ್ಮಾಣ ಮಾಡುತ್ತಿರುವ ಗುತ್ತಿಗೆದಾರರ ಮತ್ತು ಈ ರಸ್ತೆ ಕಾಮಗಾರಿಯನ್ನು ಕೈಗೊಂಡ ಗುತ್ತಿಗೆ ದಾರರ ವಿರುದ್ದ ಸಾರ್ವಜನಿಕರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Edited By : Vijay Kumar
Kshetra Samachara

Kshetra Samachara

09/01/2025 10:01 pm

Cinque Terre

10.04 K

Cinque Terre

0