ಕಾರವಾರ (ಉತ್ತರಕನ್ನಡ): ಏಷ್ಯಾದಲ್ಲಿಯೇ ಅತಿದೊಡ್ಡ ವಿಮಾನ ವಾಹಕ ಯುದ್ಧ ನೌಕೆ "ವಿಕ್ರಮಾದಿತ್ಯ" ಭಾರತೀಯ ನೌಕಾಪಡೆಯ ಕಾರ್ಯಾಚರಣೆಗೆ ಸೇರಿ ಎಂಟು ವರ್ಷಗಳಾಗಿವೆ. ಈ ನಡುವೆ ನೌಕೆಯೊಳಗೆ ಹೊಸ ಮ್ಯೂಸಿಯಂ ನ್ನು ನೌಕಾಪಡೆ ನಿರ್ಮಿಸಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.
284 ಮೀಟರ್ ಉದ್ದ, 60 ಮೀಟರ್ ಎತ್ತರ ಇರುವ ಐಎನ್ಎಸ್ ವಿಕ್ರಮಾದಿತ್ಯ, 34 ಯುದ್ಧ ವಿಮಾನ ಹಾಗೂ ಹೆಲಿಕಾಪ್ಟರ್‌ಗಳನ್ನು ಏಕಕಾಲದಲ್ಲಿ ಹೊರುವ ಸಾಮರ್ಥ್ಯ ಹೊಂದಿದೆ. 2013ರ ನವೆಂಬರ್‌ನಲ್ಲಿ ಭಾರತೀಯ ನೌಕಾಪಡೆ ಸೇವೆಗೆ ಸೇರ್ಪಡೆಗೊಂಡು 2014ರ ಜೂನ್ ಗೆ ಕಾರವಾರದಲ್ಲಿ ನೆಲೆ ಕಂಡು ತನ್ನ ಸೇವೆ ಆರಂಭಿಸಿದ ವಿಕ್ರಮಾದಿತ್ಯ, ಇತ್ತೀಚಿನವರೆಗೆ ದೇಶದ ಏಕೈಕ ಯುದ್ಧವಿಮಾನ ವಾಹಕ ನೌಕೆಯಾಗಿತ್ತು. ಆದರೆ, ಸದ್ಯ ಐಎನ್ಎಸ್ ವಿರಾಟ್ ಭಾರತೀಯ ನೌಕಾಪಡೆಗೆ ಸೇರ್ಪಡೆಗೊಂಡ ಬಳಿಕ ವಿಕ್ರಮಾದಿತ್ಯದ ಮೇಲಿನ ಅವಲಂಬನೆ ಕೂಡ ಕಡಿಮೆಯಾಗಲಿದೆ.
ನಿವೃತ್ತಿಗೂ ಮುನ್ನವೇ "ವಿಕ್ರಮಾದಿತ್ಯ" ನೌಕೆ ಒಳಗೆ ಮ್ಯೂಸಿಯಂ ನಿರ್ಮಿಸಿ ನೌಕಾಪಡೆ, ಸಾರ್ವಜನಿಕರಿಗೆ ನೌಕೆಯ ಇತಿಹಾಸ ತಿಳಿಸುವ ಕಾರ್ಯಕ್ಕೆ ಇದೀಗ ಮುಂದಾಗಿದೆ. 'ಬಾಕು'ನಿಂದ 'ಅಡ್ಮಿರಲ್ ಗೋರ್ಷ್ಕೋವ್' ಗೆ, ಇಂದಿನ 'ವಿಕ್ರಮಾದಿತ್ಯ' ವರೆಗಿನ ಪ್ರಯಾಣವನ್ನು ಈ ಮ್ಯೂಸಿಯಂ ಕಣ್ಣಿಗೆ ಕಟ್ಟಿ ಕೊಡಲಿದೆ. ಭೂತ, ವರ್ತಮಾನ ಮತ್ತು ಭವಿಷ್ಯಕ್ಕಾಗಿ ಈ ಮ್ಯೂಸಿಯಂ ಸಮರ್ಪಿಸಲಾಗಿದೆ ಎಂದು ನೌಕಾಪಡೆ ಹೇಳಿಕೊಂಡಿದೆ.
PublicNext
08/10/2022 04:35 pm