ಕಾರವಾರ : ವಿಶ್ವ ಪ್ರವಾಸೋದ್ಯಮ ದಿನದ ಪ್ರಯುಕ್ತ ಕಾರವಾರ ನಗರದ ಕರಾವಳಿ ಟ್ರೈನಿಂಗ್ ಇನ್ಸ್ಟಿಟ್ಯೂಟ್, ರೋಟರಿ ಕ್ಲಬ್ ಕಾರವಾರ ಪಶ್ಚಿಮ ಹಾಗೂ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಕಾರವಾರ ನಗರದಲ್ಲಿ ಮೆರವಣಿಗೆ ನಡೆಸಲಾಯಿತು.
ಮೆರವಣಿಗೆಯಲ್ಲಿ ಕರಾವಳಿ ಟ್ರೈನಿಂಗ್ ಇನ್ಸ್ಟಿಟ್ಯೂಟ್‌ನ ವಿದ್ಯಾರ್ಥಿಗಳು ಉತ್ತರಕನ್ನಡ ಜಿಲ್ಲೆಯ ಪ್ರವಾಸೋದ್ಯಮ ತಾಣಗಳ ಚಿತ್ರಗಳನ್ನು ಪ್ರದರ್ಶಿಸುತ್ತಾ ಸುಮಾರು 5 ಕಿ.ಮೀ. ಜಾಥಾ ನಡೆಸಿದರು. ಕಾರವಾರದ ಗ್ರೀನ್ ಸ್ಟ್ರೀಟ್ ನಿಂದ ಆರಂಭವಾದ ಮೆರವಣಿಗೆಯು, ಸುಭಾಷ ಚಂದ್ರ ಬೋಸ್ ವೃತ್ತ, ಐ ಲವ್ ಕಾರವಾರ ಪಾಯಿಂಟ್, ರಾಕ್ ಗಾರ್ಡನ್, ವಾರ್ ಶಿಪ್ ಮ್ಯೂಸಿಯಂ ಹಾಗೂ ರವೀಂದ್ರನಾಥ್ ಟ್ಯಾಗೋರ್ ಬೀಚ್ ವರೆಗೆ ಸಾಗಿತು.
ಈ ವೇಳೆ ನೌಕಾಪಡೆಯ ನಿವೃತ್ತ ಕಮಾಂಡರ್ ಎ.ಆರ್.ಡಿಸೋಜಾ, ಉತ್ತರ ಕನ್ನಡ ಜಿಲ್ಲೆಯ ಪ್ರವಾಸೋದ್ಯಮ ಸ್ಥಳಗಳ ಮಹತ್ವಗಳನ್ನು ತಿಳಿಸಿ, ಯುವ ಪೀಳಿಗೆಯು ಇವುಗಳ ಅಭಿವೃದ್ಧಿಗಾಗಿ ಶ್ರಮಿಸಬೇಕು ಎಂದು ಕರೆ ಕೊಟ್ಟರು.
PublicNext
27/09/2022 04:09 pm