", "articleSection": "Government", "image": { "@type": "ImageObject", "url": "https://prod.cdn.publicnext.com/s3fs-public/387839-1736577333-WhatsApp-Image-2025-01-11-at-11.37.25-AM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "abhishek.kamoji" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಶಿರಸಿ: ನಗರದ ಹೃದಯ ಭಾಗದಲ್ಲಿರುವ ಮರಾಠಿಕೊಪ್ಪ ರಸ್ತೆ ಹದಗೆಟ್ಟು ವಾಹನ ಸವಾರರಿಗೆ ಕಿರಿಕಿರಿ ಉಂಟು ಮಾಡಿದೆ. ಅಲ್ಲದೇ ವಾಹನ ಸವಾರರು ಮತ್ತು ಪ...Read more" } ", "keywords": "Shirasi: Kayakalpa for Marathi Koppa Road...?,Uttara-Kannada,Government", "url": "https://publicnext.com/article/nid/Uttara-Kannada/Government" }
ಶಿರಸಿ: ನಗರದ ಹೃದಯ ಭಾಗದಲ್ಲಿರುವ ಮರಾಠಿಕೊಪ್ಪ ರಸ್ತೆ ಹದಗೆಟ್ಟು ವಾಹನ ಸವಾರರಿಗೆ ಕಿರಿಕಿರಿ ಉಂಟು ಮಾಡಿದೆ. ಅಲ್ಲದೇ ವಾಹನ ಸವಾರರು ಮತ್ತು ಪಾದಚಾರಿಗಳು ತಮ್ಮ ಜೀವವನ್ನು ಕೈಯಲ್ಲಿಯೇ ಇಟ್ಟುಕೊಂಡು ನಡೆದಾಡುವ ಪರಸ್ಥಿತಿ ಉಂಟಾಗಿದೆ ಎಂದು ಅಲ್ಲಿನ ಸ್ಥಳೀಯ ನಿವಾಸಿಗಳು ಮತ್ತು ಸಾರ್ವಜನಿಕರು ನಗರ ಸಭೆ ಮತ್ತು ಜನಪ್ರತಿನಿಧಿಗಳ ವಿರುದ್ದ ತಮ್ಮ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಕಳೆದ ಎರಡು ವರ್ಷಗಳಿಂದ ಮರಾಠಿಕೊಪ್ಪದ ಮುಖ್ಯ ರಸ್ತೆ ಹೋಂಡ ಮಯಾವಾಗಿದ್ದು ಅಲ್ಲಲ್ಲಿ ಡಾಂಬರೀಕರಣ ಕಿತ್ತು ಬಿದಿದ್ದು ಬಸ್ಸು ಮತ್ತು ಲಾರಿಗಳಂತಹ ವಾಹನಗಳು ಬಂದರೆ ದೂಳಿನಿಂದ ಆವರಿಸಿಕೊಳ್ಳುತ್ತದೆ .
ಇದರಿಂದ ಸಾರ್ವಜನಿಕರಿಗೆ ಅಸ್ತಮಾ ಮುಂತಾದ ಕಾಯಿಲೆಗಳು ಬರುವ ಸಾಧ್ಯತೆ ಉಂಟು ಎಂದು ಸ್ಥಳೀಯರು ಮಾತನಾಡುತಿದ್ದಾರೆ . ಕೇವಲ ಕೂದಲಳತೆಯಲ್ಲಿರುವ ನಗರ ಸಭೆ, ನಗರ ಸಭೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸಾರ್ವಜನಿಕರ ಈ ಆಗ್ರಹಕ್ಕೆ ಗಮನಹರಿಸಿ ರಸ್ತೆಯ ದುರಸ್ತಿ ಕಾರ್ಯವನ್ನು ಕೈಗೊಂಡು ಸಾರ್ವಜನಿಕರ ಹಿತದೃಷ್ಟಿಯಿಂದ ಸುಗಮವಾಗಿ ಸಂಚಾರ ಮಾಡಲು ಕ್ರಮಕೈಗೊಳ್ಳಬೇಕೆಂದು
ಆಗ್ರಹಿಸಿದ್ದಾರೆ.
ಎರಡೆರಡು ಭಾರಿ ಗುದ್ದಲಿ ಪೂಜೆಯಾದರು ಡಾಂಬರೀಕರಣಕ್ಕೆ ಯೋಗ ಕೂಡಿಬಂದಿಲ್ಲ, ಕಳೆದ ಒಂದೂವರೇ ತಿಂಗಳಿನಿಂದ ನೀರು ಸರಬರಾಜಿನ ಪೈಪ್ ಲೈನ್ ಜೋಡಣೆ ಕಾರ್ಯ ಆರಂಭವಾಗಿದ್ದರು, ತ್ವರಿತವಾಗಿ ಮುಗಿಯುತ್ತಿಲ್ಲ , ಮರಾಠಿಕೊಪ್ಪದ ಭಾಗದಲ್ಲಿ ನಲ್ಲಿ ನೀರು ಸರಿಯಾಗಿ ಬರುತ್ತಿಲ್ಲ ಇಡೀ ಮರಾಠಿಕೊಪ್ಪವನ್ನು ಪೈಪ್ ಜೋಡಣೆ ಹೆಸರಲ್ಲಿ ರಸ್ತೆಯನ್ನು ಅಗೆಯಲಾಗಿದೆ . ಇದರಿಂದ ಸಾರ್ವಜನಿಕರು ಮೂಲಭೂತ ಸೌಲಭ್ಯದಿಂದ ವಂಚಿರಾಗಬಾರದೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಶಂಕರ ಜಿ ಜಾವೂರ, ಶಿರಸಿ
Kshetra Samachara
11/01/2025 12:05 pm