ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರವಾರ: ನವರಾತ್ರಿಯ ಗರ್ಭಾ ನೃತ್ಯದಲ್ಲಿ ಪಾಲ್ಗೊಂಡು ಸಂಭ್ರಮಿಸಿದ ಉತ್ತರಕನ್ನಡ ಎಸ್ಪಿ

ಕಾರವಾರ (ಉತ್ತರಕನ್ನಡ): ಕಾರವಾರ ತಾಲೂಕಿನ ಬಾಂಡಿಶಿಟ್ಟಾ ನವರಾತ್ರಿ ಉತ್ಸವ ಸಮಿತಿಯ ರಜತ ಮಹೋತ್ಸವದಲ್ಲಿ ಭಾನುವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ ಪೆನ್ನೇಕರ್ ಪಾಲ್ಗೊಂಡರು.

ರಜತ ಮಹೋತ್ಸವದ ಸಭಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅವರು, ದಾಂಡಿಯಾ ಹಾಗೂ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಉತ್ತಮ ಪ್ರತಿಭೆ ತೋರಿದ ತಂಡಗಳಿಗೆ ಹಾಗೂ ಸ್ಪರ್ಧಿಗಳಿಗೆ ಬಹುಮಾನ ವಿತರಿಸಿದರು. ಈ ವೇಳೆ ಮಾತನಾಡಿದ ಅವರು, 25 ವರ್ಷಗಳಿಂದ ನಿರಂತರವಾಗಿ ಕಾರ್ಯಕ್ರಮ ಆಯೋಜಿಸಕೊಂಡು ಬರುತ್ತಿರುವ ಬಾಂಡಿಶಿಟ್ಟಾ ನವರಾತ್ರಿ ಉತ್ಸವ ಸಮಿತಿಯ ಕಾರ್ಯ ಶ್ಲಾಘಿಸಿದರು. ಕಾರವಾರಿಗರಲ್ಲಿ ಹಾಸುಹೊಕ್ಕಾಗಿರುವ ರಾಜಸ್ಥಾನಿ, ಗುಜರಾತಿಗಳ ನವರಾತ್ರಿ ಸಂಪ್ರದಾಯದ ಕುರಿತೂ ಮೆಚ್ಚುಗೆ ವ್ಯಕ್ತಪಡಿಸಿದರು.

ಸಭಾ ಕಾರ್ಯಕ್ರಮದ ಬಳಿಕ ತಮ್ಮ ಸಹೋದರಿಯ ಜೊತೆಗೂಡಿ ಸ್ಥಳೀಯರೊಂದಿಗೆ ಎಸ್ಪಿ ಪೆನ್ನೇಕರ್ ಗರ್ಭಾ ನೃತ್ಯಕ್ಕೆ ಹೆಜ್ಜೆ ಹಾಕಿದರು. ಕೇಸರಿ ಪೇಟ, ಕೇಸರಿ ಬಟ್ಟೆಯೊಂದಿಗೆ ನೃತ್ಯಕ್ಕಿಳಿದಿದ್ದ ಯುವತಿಯರು, ಮಹಿಳೆಯರಿಗೆ ಡಾ.ಪೆನ್ನೇಕರ್ ಕೂಡ ಗರ್ಭಾ ನೃತ್ಯದಲ್ಲಿ ಪಾಲ್ಗೊಳ್ಳುವ ಮೂಲಕ ಹುರಿದುಂಬಿಸಿದರು. ಸುಮಾರು ಅರ್ಧ ಗಂಟೆಗಳ ಕಾಲ ಎಸ್ಪಿ ಗರ್ಭಾ ನೃತ್ಯ ಮಾಡಿ ನೋಡುಗರ ಗಮನ ಸೆಳೆದರು. ಮಧ್ಯದಲ್ಲಿ ಎಸ್ಪಿಯವರ ಪುಟ್ಟ ಮಗಳು ಕೂಡ ಕೆಲ ನಿಮಿಷಗಳ ಕಾಲ ಹೆಜ್ಜೆ ಹಾಕಿದರು.

Edited By : Shivu K
PublicNext

PublicNext

03/10/2022 10:35 am

Cinque Terre

20.09 K

Cinque Terre

0