ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರವಾರದಲ್ಲಿ ನವರಾತ್ರಿ ರಂಗು: ದಾಂಡಿಯಾದಲ್ಲಿ ಭರ್ಜರಿ ಸ್ಟೆಪ್ಸ್

ಕಾರವಾರ (ಉತ್ತರಕನ್ನಡ): ನವರಾತ್ರಿ ಸಾಂಪ್ರದಾಯಿಕ ಆಚರಣೆಯಲ್ಲಿ ದಾಂಡಿಯಾ ನೃತ್ಯವೂ ಒಂದಾಗಿದೆ. ಝಗಮಗಿಸುವ ದೀಪಾಲಂಕಾರದ ಮಧ್ಯದಲ್ಲಿ ಕಾರವಾರದ ವಿವಿಧೆಡೆ ದಾಂಡಿಯ ನೃತ್ಯದಲ್ಲಿ ಜನ ಅತಿ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ.

ಕಾರವಾರದ ಕುಂಠಿ ಮಹಾಮಾಯೆ ದೇವಸ್ಥಾನ, ಸಂತೋಷಿಮಾತಾ ದೇವಸ್ಥಾನ, ಕೆಎಚ್ಬಿ ಗಣಪತಿ ದೇವಸ್ಥಾನದ ಸಭಾಂಗಣ, ಕಳಸಾವಾಡದ ಬಯಲು ಜಾಗ, ಗುನಗಿವಾಡಾ, ಖಾರ್ವಿವಾಡಾ, ಸಾಯಿಕಟ್ಟಾ, ಕೋಡಿಬಾಗ, ಸದಾಶಿವಗಡ ಸೇರಿದಂತೆ ಹಲವು ಕಡೆ ರಾತ್ರಿಯಾದರೆ ಸಾಕು ದಾಂಡಿಯಾ ನೃತ್ಯದ ಕುಣಿತ ಪ್ರಾರಂಭವಾಗಿಬಿಡುತ್ತಿದೆ. ವಯಸ್ಸಿನ ಅಂತರವಿಲ್ಲದೆ ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರೂ ದಾಂಡಿಯಾಕ್ಕೆ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ.

ಇನ್ನು ನೃತ್ಯದ ಸವಿ ಸವಿಯಲು ಸಾವಿರಾರು ಸಂಖ್ಯೆಯಲ್ಲಿ ಪ್ರೇಕ್ಷಕರು ಪಾಲ್ಗೊಳ್ಳುತ್ತಿದ್ದು, ನವರಾತ್ರಿ ಉತ್ಸವದ ಉತ್ಸಾಹ ದ್ವಿಗುಣಗೊಳಿಸುತ್ತಿದ್ದಾರೆ. ದಾಂಡಿಯಾ ಮೂಲತಃ ಗುಜರಾತಿ, ರಾಜಸ್ಥಾನಿಗಳ ನೃತ್ಯವಾಗಿದ್ದರೂ ಸಹ ಕಾರವಾರದ ಜನರಿಗೂ ಇದೀಗ ಹಾಸುಹೊಕ್ಕಾಗಿದೆ. ಪ್ರತಿಯೊಬ್ಬರೂ ಇದರಲ್ಲಿ ಭಾಗವಹಿಸುತ್ತಾರೆ. ಊರಿನ ಎಲ್ಲರೂ ಒಂದೆಡೆ ಸೇರಿ ಮನೋರಂಜನೆ ಪಡೆಯುವುದೇ ಒಂದು ರೀತಿಯ ಖುಷಿಯ ವಿಚಾರ ಎನ್ನುತ್ತಾರೆ ಸ್ಥಳೀಯರಾದ ವಾಸಂತಿ.

ಒಟ್ಟಿನಲ್ಲಿ ಕಾರವಾರದಲ್ಲಿ ನವರಾತ್ರಿ ಆಚರಣೆ ರಂಗೇರಿದ್ದು, ದಾಂಡಿಯಾ ಇದಕ್ಕೆ ಇನ್ನಷ್ಟು ಮೆರಗು ನೀಡಿದೆ. ನಿಮ್ಗೂ ಕೂಡ ಈ ಡ್ಯಾನ್ಸ್ ಗಳನ್ನ ಕಂಡು ಪಾಲ್ಗೊಳ್ಳೋದಿಕ್ಕೆ ಮನಸ್ಸಾಗಿದ್ರೆ ಖಂಡಿತ ಕಾರವಾರಕ್ಕೆ ನವರಾತ್ರಿ ಮುಗಿಯೋದ್ರೊಳಗೊಮ್ಮೆ ಭೇಟಿ ನೀಡಿ, ದಾಂಡಿಯಾ ಆಡಬಹುದಾಗಿದೆ.

Edited By :
PublicNext

PublicNext

01/10/2022 08:42 am

Cinque Terre

46.36 K

Cinque Terre

0