ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಶ್ವ ಪ್ರವಾಸೋದ್ಯಮ ದಿನ; ಉತ್ತರಕನ್ನಡದ ಪ್ರವಾಸಿ ತಾಣಗಳ ವಿಡಿಯೋ ಬಿಡುಗಡೆ

ಕಾರವಾರ: ಉತ್ತರಕನ್ನಡ ಹೇಳಿಕೇಳಿ ಪ್ರವಾಸಿಗರ ಸ್ವರ್ಗ. ಹತ್ತಾರು ಪ್ರೇಕ್ಷಣೀಯ, ಧಾರ್ಮಿಕ- ಪುರಾಣ ಪ್ರಸಿದ್ಧ ಸ್ಥಳಗಳನ್ನ ಹೊಂದಿರುವ ಜಿಲ್ಲೆ ನೈಸರ್ಗಿಕವಾಗಿಯೂ ಸಂಪದ್ಭರಿತ ಜಿಲ್ಲೆ. ಇಂದು ಜಗತ್ತಿನೆಲ್ಲೆಡೆ ಆಚರಿಸಲಾಗುತ್ತಿರುವ ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ಉತ್ತರಕನ್ನಡ ಜಿಲ್ಲಾಡಳಿತ ಜಿಲ್ಲೆಯ ಪ್ರವಾಸಿ ತಾಣಗಳ ವಿಡಿಯೋ ಬಿಡುಗಡೆ ಮಾಡಿದ್ದು, ಎಲ್ಲರ ಕಣ್ಮನ ಸೆಳೆಯುತ್ತಿದೆ.

ಧಾರ್ಮಿಕತೆ, ಸಂಸ್ಕೃತಿ- ಸಂಪ್ರದಾಯ, ಕಡಲು, ಜಲಪಾತಗಳು, ಒಟ್ಟಾರೆ ನಿಸರ್ಗ ರಮಣೀಯ ಸ್ಥಳಗಳನ್ನೊಳಗೊಂಡಿರುವ ಉತ್ತರಕನ್ನಡದ ಎಲ್ಲಾ ಪ್ರವಾಸಿ ತಾಣಗಳನ್ನ ಒಂದೆಡೆ ಕಾಣಸಿಗುವಂತೆ ಉತ್ತರಕನ್ನಡ ಜಿಲ್ಲಾಡಳಿತ ಇಂದು ಪ್ರವಾಸೋದ್ಯಮ ದಿನದ ಅಂಗವಾಗಿ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ತೆರೆದಿಡಲಾಗಿದೆ.

'ಉತ್ತರಕನ್ನಡ- ಕರ್ನಾಟಕದ ವಿಶಿಷ್ಟ ಸ್ವರ್ಗ' ಘೋಷವಾಕ್ತದಡಿ ಬಿಡುಗಡೆಯಾಗಿರುವ ಈ ವಿಡಿಯೋಗಳಲ್ಲಿ ಹವ್ಯಾಸಿ ವಿಡಿಯೋ- ಫೊಟೊಗ್ರಾಫರ್ ಗಳಾದ ಗೋಪಿ ಜಾಲಿ, ಸಂದೀಪ್ ಹಾಗೂ ಪ್ರಮೋದ್ ಗೌಡ ಅವರು ತಮ್ಮ ಕ್ಯಾಮೆರಾಗಳಲ್ಲಿ ಸೆರೆ ಹಿಡಿದ ದೃಶ್ಯಗಳನ್ನ ಬಳಸಿಕೊಳ್ಳಲಾಗಿದೆ. ಈ ವಿಡಿಯೋವನ್ನ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಅಧಿಕೃತ ವೆಬ್‌ಸೈಟ್‌ uttarakannada.orgನಲ್ಲಿ ಅಪ್ಲೋಡ್ ಮಾಡಲಾಗಿದೆ.

Edited By : PublicNext Desk
Kshetra Samachara

Kshetra Samachara

27/09/2022 10:17 pm

Cinque Terre

2.86 K

Cinque Terre

0