ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರವಾರ: ಗೋಕರ್ಣ ಗುರುಕುಲ ಶಿಕ್ಷಣಕ್ಕೆ ಭಾರಿ ಬೇಡಿಕೆ!; ಪಾರಂಪರಿಕ ಕಲೆ ಉಳಿವಿಗೆ ವಿವಿ ಸ್ಥಾಪನೆ

ಕಾರವಾರ: ದೇಶದ ಪರಂಪರೆ ಹಾಗೂ ಹಿಂದೂ ಸಂಸ್ಕೃತಿಯ ಉಳಿವಿಗಾಗಿ ಪಣ ತೊಟ್ಟು ದೇಶದಲ್ಲಿಯೇ ಎಲ್ಲೂ ಸಿಗದಂತಹ ಗುರುಕುಲ ಶಿಕ್ಷಣ ಪ್ರಾರಂಭಿಸಿದ್ದ ಗೋಕರ್ಣದ ವಿಷ್ಣುಗುಪ್ತ ವಿದ್ಯಾ ಪೀಠಕ್ಕೆ ದಾಖಲಾಗುವ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗ ತೊಡಗಿದ್ದು, ಯುವಜನರು ಮತ್ತೆ ಭಾರತೀಯ ಸಂಸ್ಕೃತಿಯತ್ತ ಮುಖ ಮಾಡುತ್ತಿದ್ದಾರೆ ಎಂಬುದಕ್ಕೆ ಸಾಕ್ಷಿ ಒದಗಿಸಿದೆ.

ಗೋಕರ್ಣದ ವಿಷ್ಣುಗುಪ್ತ ವಿದ್ಯಾಪೀಠದಲ್ಲಿ ಗುರುಕುಲ ಶಿಕ್ಷಣ ನಡೆಯುತ್ತಿದೆ. ಇಲ್ಲಿ 64 ವಿದ್ಯೆಗಳನ್ನು ಕಲಿಸಲಾಗುತ್ತಿದೆ. ಆಧುನಿಕ ಶಿಕ್ಷಣದೊಂದಿಗೆ, ದೇಶದ ಸಂಸ್ಕೃತಿ, ಧಾರ್ಮಿಕ, ಪಾರಂಪರಿಕ ಶಿಕ್ಷಣ ಒದಗಿಸುತ್ತಿದೆ. ನಾಡಿನ ಮೂಲೆ ಮೂಲೆಗಳಿಂದ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದೆ. ಋಷಿಯುಗ ಮತ್ತು ನವಯುಗ ಶಿಕ್ಷಣದ ಸಮನ್ವಯದೊಂದಿಗೆ ಗುರುಕುಲಗಳು ಕಾರ್ಯ ನಿರ್ವಹಿಸುತ್ತಿವೆ.

ಕಳೆದ 2 ವರ್ಷದಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ ಮಕ್ಕಳ ಪೈಕಿ 450 ವಿದ್ಯಾರ್ಥಿಗಳಿಗಷ್ಟೇ ಇಲ್ಲಿ ಅವಕಾಶ ಸಿಕ್ಕಿದೆ. ದಾಖಲಾಗಿರುವ ವಿದ್ಯಾರ್ಥಿಗಳಿಗಿಂತ ಎರಡು ಪಟ್ಟು ವಿದ್ಯಾರ್ಥಿಗಳು ಅವಕಾಶ ಸಿಗದೆ ವಾಪಸ್ಸಾಗಿದ್ದಾರೆ. ಸ್ವಾಮೀಜಿಯವರ ಮುಂದಾಲೋಚನೆಯಿಂದಾಗಿ ನಶಿಸಿ ಹೋಗುತ್ತಿದ್ದ ಶಿಕ್ಷಣವನ್ನು ಮರಳಿ ಪಡೆಯುವಂತಾಗಿದೆ ಎನ್ನುತ್ತಾರೆ ಸ್ಥಳೀಯರು.

ಒಟ್ಟಿನಲ್ಲಿ ಆಧುನಿಕತೆಯ ಭರಾಟೆಯಲ್ಲಿ ಮಾಯವಾಗುತ್ತಿದ್ದ ಗುರುಕುಲ ಶಿಕ್ಷಣಕ್ಕೆ ಒತ್ತು ನೀಡುವುದರ ಜೊತೆಗೆ ಇದೀಗ ವಿಶ್ವವಿದ್ಯಾಲಯ ಸ್ಥಾಪನೆಗೆ ವಿಷ್ಣುಗುಪ್ತ ವಿದ್ಯಾಪೀಠ ಮುಂದಾಗಿರುವುದು ನಿಜಕ್ಕೂ ಶ್ಲಾಘನೀಯ. ಮುಂದಿನ ದಿನಗಳಲ್ಲಿ ಈ ವಿದ್ಯಾಪೀಠದಲ್ಲಿ ಇನ್ನೂ ಹೆಚ್ಚಿನ ಮಕ್ಕಳು ಅಧ್ಯಯನ ಮಾಡಿ, ದೇಶದ ಸಂಸ್ಕೃತಿ- ಪರಂಪರೆ ಉಳಿಸಿ- ಬೆಳೆಸುವ ಕಾರ್ಯವಾಗಲಿ ಎನ್ನುವುದೇ ನಮ್ಮ ಆಶಯ.

Edited By :
Kshetra Samachara

Kshetra Samachara

09/09/2022 06:39 pm

Cinque Terre

2.82 K

Cinque Terre

0

ಸಂಬಂಧಿತ ಸುದ್ದಿ