ಕಾರವಾರ (ಉತ್ತರಕನ್ನಡ): ಭಟ್ಕಳ ನಗರ ಭಾಗದಲ್ಲಿ ಸೈಕಲ್ ಹಾಗೂ ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿಯ ಮನೆ ಮೇಲೆಯ ದಾಳಿ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, ಮನೆಯಲ್ಲಿ ಜಮಾ ಮಾಡಿಟ್ಟಿದ್ದ 25 ಸೈಕಲ್ ಹಾಗೂ 3 ಬೈಕ್ ಜಪ್ತಿಪಡಿಸಿಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಕೊಟೇಶ್ವರ ರೋಡ್ ಬಳಿ ನಡೆದಿದೆ.
ಭಟ್ ನಗರ ಠಾಣೆ ಸಿಪಿಐ ದಿವಾಕರ ಪಿ. ನೇತೃತ್ವದ ತಂಡ ರಾತ್ರೋರಾತ್ರಿ ಆರೋಪಿ ಆರೋಪಿ ಮಂಜು ಕೊರಗರ ಎನ್ನುವವನ ಮನೆ ಮೇಲೆ ದಾಳಿ ನಡೆಸಿತ್ತು. ಆದರೆ ಬಟ್ಟೆ ಬದಲಾವಣೆ ಮಾಡುವ ನೆಪದಲ್ಲಿ ಮನೆಯ ಹಿಂಬದಿಯಿಂದ ಆರೋಪಿ ಪರಾರಿಯಾಗಿದ್ದಾನೆ. ಈತ ಭಟ್ಕಳದಲ್ಲಿ ಹಲವಾರು ದಿನದಿಂದ ಬೈಕ್ ಹಾಗೂ ಸೈಕಲ್ ಕಳ್ಳತನ ಮಾಡುತ್ತಿದ್ದ ಎನ್ನಲಾಗಿದೆ.
ಪೊಲೀಸ್ ದಾಳಿಯ ಸುದ್ದಿ ತಿಳಿದು ಮನೆ ಬಳಿ ನೂರಾರು ಯುವಕರು ಧಾವಿಸಿ ತಾವು ಕಳೆದುಕೊಂಡ ಸೈಕಲ್ ಹಾಗೂ ಬೈಕ್ ಗೆ ಹುಡುಕಾಟ ನಡೆಸಿದ್ದಾರೆ. ಕಾರ್ಯಾಚರಣೆಯಲ್ಲಿ ನಗರ ಠಾಣೆ ಪಿಎಸೈಗಳಾದ ಸುಮ ಆಚಾರ್ಯ, ಹನುಮಂತಪ್ಪ ಕುಡಗುಂಟಿ, ಯಲ್ಲಪ್ಪ ಮಾದರ, ಪ್ರೊಬೆಷನರಿ ಪಿಎಸೈ ಜಗದೀಶ್ ಹಾಗೂ ಎಎಸ್ಐ ರವಿ ನಾಯ್ಕ, ನವೀನ ಬೋರ್ಕರ್ ಭಾಗಿಯಾಗಿದ್ದರು. ಈ ಬಗ್ಗೆ ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
13/10/2022 07:25 am