ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರವಾರ : ಕನ್ನಡ ಕಲಿಯಲ್ಲ ಎಂದ ಬ್ಯಾಂಕ್ ವ್ಯವಸ್ಥಾಪಕನಿಗೆ ಕರವೇ ತರಾಟೆ!!

ಕಾರವಾರ : ಕುಮಟಾ ಪಟ್ಟಣದ ಇಂಡಿಯನ್ ಓವರ್ಸೀಸ್ ಬ್ಯಾಂಕ್ ನ ಶಾಖಾ ವ್ಯವಸ್ಥಾಪಕ ರಾಕೇಶ್ ಎನ್ನುವವರು ತಾವು ಕನ್ನಡ ಕಲಿಯುವುದಿಲ್ಲ ಎಂದು ಗ್ರಾಹಕರೊಬ್ಬರೊಂದಿಗೆ ಉದ್ದಟತನ ಮೆರೆದಿದ್ದು, ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಕನ್ನಡ ಕಲಿಯುವುದಿಲ್ಲ ಎಂದ ಬ್ಯಾಂಕ್ ವ್ಯವಸ್ಥಾಪಕನನ್ನ ಸದ್ಯ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡಿದ್ದಾರೆ. ಬ್ಯಾಂಕ್ ಬಳಿ ಜಮಾಯಿಸಿದ ಕರವೇ ಕಾರ್ಯಕರ್ತರು, ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ ನೇತೃತ್ವದಲ್ಲಿ ಬ್ಯಾಂಕ್ ವ್ಯವಸ್ಥಾಪಕನಿಗೆ ಕನ್ನಡ ಕಲಿಯುವಂತೆ ಬುದ್ಧಿವಾದ ಹೇಳಿದ್ದಾರೆ.

ಕನ್ನಡ ಕಲಿತು ಮಾತನಾಡಿ ಎಂದರೆ ಈತ ಉದ್ಧಟತನದ ಮಾತನಾಡಿದ್ದಾರೆ. ಕನ್ನಡ ಕಲಿತು ಬ್ಯಾಂಕ್ಗೆ ಆಗಮಿಸುವ ಗ್ರಾಹಕರ ಜತೆ ಕನ್ನಡದಲ್ಲಿಯೇ ಮಾತನಾಡಬೇಕು ಎಂದು ಬಾಸ್ಕರ ಪಟಗಾರ ವ್ಯವಸ್ಥಾಪಕನಿಗೆ ಎಚ್ಚರಿಕೆ ನೀಡಿದ್ದಾರೆ. ಕರ್ನಾಟಕದಲ್ಲಿ 3 ವರ್ಷದಿಂದ ಬ್ಯಾಂಕ್ ನಲ್ಲಿ ಸೇವೆ ಸಲ್ಲಿಸುತ್ತಿದ್ದರೂ ಒಂದೇ ಒಂದು ಶಬ್ದ ಕನ್ನಡ ಮಾತನಾಡುವುದಿಲ್ಲ. ಕನ್ನಡ ಕಲಿತು ಇಲ್ಲಿ ಸೇವೆ ಮಾಡಿ, ಇಲ್ಲವಾದಲ್ಲಿ ನಿಮ್ಮ ರಾಜ್ಯಕ್ಕೆ ವರ್ಗಾವಣೆ ಮಾಡಿಸಿಕೊಳ್ಳಿ ಎಂದು ಪಟಗಾರ ಮ್ಯಾನೇಜರ್ ಗೆ ಎಚ್ಚರಿಕೆ ನೀಡಿದ್ದಾರೆ.

ಕೊನೆಗೆ ಕರವೇ ಕಾರ್ಯಕರ್ತರಿಗೆ ಮಣಿದ ಶಾಖಾ ವ್ಯವಸ್ಥಾಪಕ ರಾಕೇಶ ರಂಜನ, ಕನ್ನಡ ಕಲಿತು ಕನ್ನಡದಲ್ಲಿಯೇ ಮಾತನಾಡಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದ ಬಳಿಕ ಕಾರ್ಯಕರ್ತರು ವಾಪಸ್ಸಾದರು.

Edited By : Shivu K
PublicNext

PublicNext

11/10/2022 08:50 am

Cinque Terre

37.15 K

Cinque Terre

11

ಸಂಬಂಧಿತ ಸುದ್ದಿ