ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರವಾರ : ವಾಟ್ಸಪ್ ಸ್ಟೇಟಸ್ ಹಾಕಿದ್ದಕ್ಕೆ ಈರ್ವರು ಪೊಲೀಸರ ವಶಕ್ಕೆ!

ಕಾರವಾರ : ಅನ್ಯ ಕೋಮಿನ ಜನರನ್ನು ಕೆರಳಿಸುವ ರೀತಿಯಲ್ಲಿ ವಾಟ್ಸಪ್ ಸ್ಟೇಟಸ್ ಹಾಕಿದ್ದ ಆರೋಪದಲ್ಲಿ ಶಿರಸಿ ಪೊಲೀಸರು ಈರ್ವರನ್ನು ವಶಕ್ಕೆ ಪಡೆದಿದ್ದಾರೆ.

ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆ ವ್ಯಾಪ್ತಿಯ ಮರಾಠಿಕೊಪ್ಪದ ನಿವಾಸಿಗಳಾದ ಗೌಸ್ ಅಜಮ್ ಹಾಗೂ ಮೆಹಬೂಬ್ ಸಾಬ್ ಎನ್ನುವವರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇವರು ಸಾರ್ವಜನಿಕ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಗೆ ಭಂಗ ತರುವ ಹಾಗೂ ಕೋಮು ಸೌಹಾರ್ಧತೆಗೆ ಧಕ್ಕೆ ತರುವಂತೆ ಅನ್ಯ ಕೋಮಿನ ಜನರನ್ನ ಕೆರಳಿಸುವಂತೆ ವಾಟ್ಸಪ್ ಸ್ಟೇಟಸ್ ಗಳನ್ನು ಹಾಕಿಕೊಂಡಿದ್ದರು. ಹೀಗಾಗಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಈರ್ವರನ್ನೂ ವಶಕ್ಕೆ ಪಡೆದು ತಹಶೀಲ್ದಾರರ ಎದುರು ಹಾಜರುಪಡಿಸಿದ್ದಾರೆ.

Edited By : Abhishek Kamoji
Kshetra Samachara

Kshetra Samachara

03/10/2022 03:37 pm

Cinque Terre

12.24 K

Cinque Terre

0

ಸಂಬಂಧಿತ ಸುದ್ದಿ