ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರವಾರ: ಎಣ್ಣೆ ಬಿಡು ಅಂದಿದ್ದೇ ತಪ್ಪಾಯ್ತು: ತಾಯಿಯ ಮಾತಿಗೆ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಯುವಕ!!

ಕಾರವಾರ (ಉತ್ತರಕನ್ನಡ): ಮದ್ಯಸೇವನೆ ಮಾಡದಂತೆ ತಾಯಿ ಬುದ್ಧಿವಾದ ಹೇಳಿದ್ದಕ್ಕೆ 18 ವರ್ಷದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ನಡೆದಿದೆ.

ಸಿದ್ದಾಪುರ ತಾಲೂಕಿನ ಹೊನ್ನೆಗದ್ದೆ ಗ್ರಾಮದಲ್ಲಿ ನಾಗೇಂದ್ರ ಚನ್ನಯ್ಯ ಆತ್ಮಹತ್ಯೆ ಮಾಡಿಕೊಂಡ ಯುವಕ. ವಿಪರೀತ ಮದ್ಯ ಸೇವನೆಗೆ ಒಳಗಾಗಿದ್ದ ಯುವಕನಿಗೆ ತಾಯಿ ಚಟ ಬಿಡುವಂತೆ ಬುದ್ಧಿ ಹೇಳಿದ್ದಳು. ಇದನ್ನೇ ಮನಸ್ಸಿಗೆ ಹಚ್ಚಿಕೊಂಡು ಮನೆಯಲ್ಲಿಯೇ ವಿಷ ಸೇವಿಸಿ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nagaraj Tulugeri
PublicNext

PublicNext

17/09/2022 10:44 pm

Cinque Terre

30.33 K

Cinque Terre

2

ಸಂಬಂಧಿತ ಸುದ್ದಿ