ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರವಾರ: ಪ್ರತಿ ಭಾನುವಾರ ಮೊಬೈಲ್ ಅಂಗಡಿಗಳಲ್ಲಿ ಕಳವು; SSLC ಹುಡುಗರ ಐನಾತಿ ಐಡಿಯಾ

ಕಾರವಾರ: ಮೊಬೈಲ್ ಅಂಗಡಿಗಳಲ್ಲಿ ಖರೀದಿ ನೆಪದಲ್ಲಿ ಪ್ರತಿ ಭಾನುವಾರ ಭೇಟಿ ನೀಡಿ, ಮೊಬೈಲ್‌ಗಳನ್ನ ಕಳವು ಮಾಡುತ್ತಿದ್ದ ಇಬ್ಬರು ಬಾಲಾರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಹೊನ್ನಾವರ ಬಸ್ ಸ್ಟ್ಯಾಂಡ್ ಹತ್ತಿರ ಕಿಂತಾಲಕೇರಿ ರಸ್ತೆಯಲ್ಲಿರುವ ಮುಖ್ಯಪ್ರಾಣ ಮೊಬೈಲ್ ಅಂಗಡಿಗೆ ಕಳೆದ ಭಾನುವಾರ ಇಬ್ಬರು ಬಾಲಕರು ಮೊಬೈಲ್ ಕವರ್ ತೆಗೆದುಕೊಳ್ಳುವ ನೆಪದಲ್ಲಿ ಭೇಟಿ ನೀಡಿ, ಅಂಗಡಿಯ ಮಾಲೀಕರಿಗೆ ಗೊತ್ತಾಗದ ರೀತಿಯಲ್ಲಿ ರಿಯಲ್ ಮಿ ಸಿ-35 ಮೊಬೈಲ್ ಹಾಗೂ ಜಿಯೋ ಡೊಂಗಲ್ ಕಳವು ಮಾಡಿಕೊಂಡು ಹೋಗಿದ್ದರು. ಈ ಬಗ್ಗೆ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳಿಂದ ಗೊತ್ತಾಗಿ ಹೊನ್ನಾವರ ಪೊಲೀಸ್ ಠಾಣೆಗೆ ಅಂಗಡಿ ಮಾಲೀಕ ಹಾಡಗೇರಿಯ ಯೋಗೇಶ ನಾಯ್ಕ ದೂರು ನೀಡಿದ್ದರು.

ಈ ದೂರಿನನ್ವಯ ತನಿಖೆ ಕೈಗೊಂಡ ಪೊಲೀಸರು, ಕುಮಟಾ ಮೂಲದ ಈರ್ವರು ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳನ್ನ ಬಂಧಿಸಿದ್ದಾರೆ. ವಿಚಾರಣೆಯ ವೇಳೆ ಅಂಕೋಲಾದಲ್ಲಿಯೂ ಮೊಬೈಲ್ ಕಳ್ಳತನ ಮಾಡಿದ್ದಾರೆಂಬ ವಿಚಾರ ಗೊತ್ತಾಗಿದೆ. ಪ್ರತಿ ಭಾನುವಾರ ಚಿಕ್ಕಪ್ಪನ ಬೈಕ್ ತೆಗೆದುಕೊಂಡು ಹೋಗಿ ಮೊಬೈಲ್ ಕದ್ದು ಪರಾರಿಯಾಗುತ್ತಿದ್ದರು. ತಮ್ಮ ತಾಲೂಕು ಬಿಟ್ಟು ಅಕ್ಕಪಕ್ಕದ ತಾಲೂಕನ್ನೆ ಈ ಬಾಲಾರೋಪಿಗಳು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಖರೀದಿಯ ನೆಪದಲ್ಲಿ ಭೇಟಿ ನೀಡಿ ಅಂಗಡಿಯವರ ಕಣ್ಣು ತಪ್ಪಿಸಿ ಮೊಬೈಲ್‌ಗಳನ್ನ ಕದ್ದು ಪರಾರಿಯಾಗುತ್ತಿದ್ದರು. ಸದ್ಯ ಬಂಧನಕ್ಕೊಳಗಾಗಿರುವ ಇಬ್ಬರನ್ನೂ ರಿಮಾಂಡ್ ಹೋಮ್‌ಗೆ ಕಳುಹಿಸಲಾಗಿದೆ.

Edited By : Vijay Kumar
PublicNext

PublicNext

14/09/2022 03:20 pm

Cinque Terre

13.17 K

Cinque Terre

0

ಸಂಬಂಧಿತ ಸುದ್ದಿ