ಕಾರವಾರ: ತಾಲೂಕಿನ ಹಣಕೋಣದ ಗ್ರಾಮ ಪುರುಷ ದೇವಸ್ಥಾನದಲ್ಲಿ ಪೂಜೆಗೆ ಬಂದವರನ್ನು ನೋಡಿ ಈರ್ವರು ನಕ್ಕ ವಿಷಯವೇ ಬಡಿದಾಟಕ್ಕೆ ಕಾರಣವಾಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ಘಟನೆ ನಡೆದಿದೆ.
ಹಣಕೋಣದ ರೋಷನ್ ನಾಯ್ಕ ಹಾಗೂ ಅವರ ಸಂಬಂಧಿಕರು ಗ್ರಾಮದ ಗ್ರಾಮಪುರುಷ ದೇವರ ಪೂಜೆಗೆಂದು ಹೋಗಿದ್ದರು. ಈ ವೇಳೆ ಸುನೀಲ್ ನಾಯ್ಕ ಹಾಗೂ ಕಲ್ಲೇಶ್ ನಾಯ್ಕ ಎನ್ನುವವರು ರೋಷನ್ ಹಾಗೂ ಅವರ ಕುಟುಂಬಸ್ಥರನ್ನ ನೋಡಿ ನಕ್ಕಿದ್ದಾರೆ. ಇದೇ ವಿಚಾರವಾಗಿ ರೋಷನ್ ಸುನೀಲ್ ಹಾಗೂ ಕಲ್ಲೇಶ್ ಅವರನ್ನು ನಕ್ಕಿದ್ದು ಯಾಕೆ ಎಂದು ಪ್ರಶ್ನಿಸಿದ್ದಾರೆ.
ಕೊನೆಗೆ ಪೂಜೆ ಮುಗಿಸಿ ಹೊರಡುವಾಗ ದೇವಸ್ಥಾನದ ಬಾಗಿಲಲ್ಲಿ ತಡೆದ ಸುನೀಲ್ ಹಾಗೂ ಕಲ್ಲೇಶ್, ರೋಷನ್ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಅಷ್ಟರಲ್ಲೇ ಜನ ಸೇರಿ ಬಿಡಿಸಿದ್ದರಿಂದ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Kshetra Samachara
12/09/2022 11:08 am