ಕಾರವಾರ : ಸಾರಾಯಿ ಎಂದು ತಿಳಿದು ನಶೆಯಲ್ಲಿ ಯಾವುದೋ ಬಾಟಲಿಯಲ್ಲಿನ ವಿಷ ಕುಡಿದು ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ಶಿರಸಿ ತಾಲೂಕಿನ ಬೊಪ್ಪನಳ್ಳಿಯಲ್ಲಿ ನಡೆದಿದೆ.
ಕೂಲಿ ಕೆಲಸ ಮಾಡಿಕೊಂಡಿದ್ದ ಭರತ್ ಶೆಟ್ಟಿ (28) ಮೃತ ವ್ಯಕ್ತಿ. ವಿಪರೀತ ಸಾರಾಯಿ ಕುಡಿಯುವ ಚಟ ಹೊಂದಿದ್ದ ಈತ, ಶಿರಸಿ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ತನ್ನ ಸ್ನೇಹಿತ ಕಿಶೋರ್ ಎನ್ನುವಾತನ ರೂಮಿಗೆ ಸಾರಾಯಿಯ ಬಾಟಲಿಯೊಂದಿಗೆ ತೆರಳಿದ್ದ.
ರೂಮಿನಲ್ಲೇ ಕುಳಿತು ಬಾಟಲಿಯಿಂದ ಅರ್ಧ ಸಾರಾಯಿ ಸೇವಿಸಿದ್ದ ಭರತ್, ಇನ್ನರ್ಧ ಸಾರಾಯಿಯ ಕುಡಿಯುವ ಮುನ್ನ ನಶೆಯಲ್ಲಿ ಸಾರಾಯಿಯ ಬಾಟಲಿಯ ಬದಲು ಯಾವುದೋ ವಿಷದ ಬಾಟಲಿಯಿಂದ ವಿಷ ಕುಡಿದು ಮೃತಪಟ್ಟಿದ್ದಾನೆ ಎನ್ನಲಾಗ್ತಿದೆ. ಇದರಿಂದಾಗಿ ಅಸ್ವಸ್ಥಗೊಂಡಿದ್ದ ಭರತ್‌ನನ್ನ ಮಂಗಳೂರು ವೆನ್‌ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.
Kshetra Samachara
27/09/2022 04:12 pm