ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರವಾರ: ರೈಲ್ವೆ ಸುರಂಗದಲ್ಲಿ ಉಡುಪಿ ವ್ತಕ್ತಿಯ ಮೃತದೇಹ ಪತ್ತೆ; ರೈಲಿನಿಂದ ಬಿದ್ದು ಸಾವು?

ಕಾರವಾರ: ಅಂಕೋಲಾ ತಾಲೂಕಿನ ಹುಲಿದೇವರವಾಡಾ ಕೊಂಕಣ ರೈಲ್ವೆ ಸುರಂಗ ಮಾರ್ಗದಲ್ಲಿ ವ್ಯಕ್ತಿಯೋರ್ವನ ಮೃತದೇಹ ಪತ್ತೆಯಾಗಿದೆ.

ಕೊಡಗು ಜಿಲ್ಲೆಯ ಮಡಿಕೇರಿಯ, ಸದ್ಯ ಉಡುಪಿಯಲ್ಲಿ ನೆಲೆಸಿರುವ ರವಿಸುಂದರ ರಾಮಪ್ಪ (57) ಎಂಬಾತನೇ ಈ ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಈತ ಗೋವಾದ ಪೆಟ್ರೋಲ್ ಪಂಪ್ ಒಂದರಲ್ಲಿ ಕೆಲಸಕ್ಕಿದ್ದ ಎನ್ನಲಾಗಿದ್ದು, ಗೋವಾದಿಂದ ಮಂಗಳೂರು ಮಾರ್ಗವಾಗಿ ಊರಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಮಾರ್ಗ ಮಧ್ಯೆ ಅಂಕೋಲಾದಲ್ಲಿ ಪ್ರಾಣಹಾನಿ ಸಂಭವಿಸಿದೆ ಎನ್ನಲಾಗಿದೆ.

ಮೃತದೇಹದ ಪಕ್ಕದಲ್ಲಿ ನ್ಯೂಸ್ ಪೇಪರ್, ಚಪ್ಪಲಿ ಮತ್ತು ಛತ್ರಿ ಕಂಡುಬಂದಿದ್ದು, ತರಚಿದ ಗಾಯಗಳಾಗಿವೆ. ಸುದ್ದಿ ತಿಳಿಯುತ್ತಲೇ ಪಿಎಸ್‌ಐ ಪ್ರವೀಣಕುಮಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nagaraj Tulugeri
Kshetra Samachara

Kshetra Samachara

15/09/2022 05:37 pm

Cinque Terre

9.96 K

Cinque Terre

0

ಸಂಬಂಧಿತ ಸುದ್ದಿ