ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರವಾರ: ಸ್ಥಳಾಂತರಕ್ಕೆ ನಕಾರ- ನಗರಸಭೆ ಸಿಬ್ಬಂದಿಯೊಡನೆ ಬೀದಿ ಬದಿ ಹೂ-ಹಣ್ಣು ವ್ಯಾಪಾರಿಗಳ ವಾಗ್ವಾದ

ಕಾರವಾರ (ಉತ್ತರ ಕನ್ನಡ): ಕಾರವಾರದ ಬೀದಿ ಬದಿಗಳಲ್ಲಿ ಹೂವು ಹಣ್ಣು ಮಾರುತ್ತಿದ್ದ ವ್ಯಾಪಾರಸ್ಥರನ್ನ ಹೊಸ ಮಾರುಕಟ್ಟೆಗೆ ನಗರಸಭೆ ಸಿಬ್ಬಂದಿ ಸ್ಥಳಾಂತರಗೊಳ್ಳಿಸಿದ್ದಾರೆ. ಒಲ್ಲದ ಮನಸ್ಸಿನಲ್ಲೇ ಕೆಲವರು ಸ್ಥಳಾಂತರಗೊಂಡರೆ, ಇನ್ನೂ ಕೆಲವರು ನಗರಸಭೆಯ ಸಿಬ್ಬಂದಿಯೊಂದಿಗೆ ವಾಗ್ವಾದವನ್ನೂ ನಡೆಸಿದ್ದಾರೆ.

ಕಳೆದ ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ಅಂಗಡಿಗಳನ್ನು ಸ್ಥಳಾಂತರಿಸಲು ನಗರಸಭೆಯವರು ಮುಂದಾಗಿದ್ದರು. ಆಗ ವ್ಯಾಪಾರಸ್ಥರು ರಸ್ತೆ ತಡೆದು, ನಗರಸಭೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಎಚ್ಚೆತ್ತ ನಗರಸಭೆಯ ಸಿಬ್ಬಂದಿ, ಈ ಬಾರಿ ಐವರು ಪೊಲೀಸ್ ಸಿಬ್ಬಂದಿ ಹಾಗೂ ಒಂದು ನಗರಸಭೆಯ ತ್ಯಾಜ್ಯ ವಿಲೇವಾರಿ ವಾಹನದೊಂದಿಗೆ ಅಂಗಡಿಗಳನ್ನ ಸ್ಥಳಾಂತರಿಸಲು ಮುಂದಾದರು.

ಈ ವೇಳೆ, ಒಬ್ಬೊಬ್ಬರಿಗೆ ಒಂದೊಂದು ನ್ಯಾಯ ಸರಿಯಲ್ಲ. ವ್ಯಾಪಾರದ ನಡುವೆ ಅಂಗಡಿಗಳನ್ನ ತೆಗೆಯಲು ಹೇಳುವುದು ಸರಿಯಲ್ಲ. ಹೊಸ ಮಾರುಕಟ್ಟೆಯ ಬಳಿ ಜನರ ಸುಳಿವೇ ಇರುವುದಿಲ್ಲ ದಿನವಿಡೀ ಕೂತರು ನೂರು ರೂ. ಗಿಟ್ಟುವುದಿಲ್ಲ. ಅಂತಹ ಜಾಗದಲ್ಲಿ ಲಕ್ಷಾಂತರ ರೂ. ಖರ್ಚು ಮಾಡಿ ಮಾರುಕಟ್ಟೆ ಕಟ್ಟಿಸಿದರೆ ಏನು ಪ್ರಯೋಜನ ಎಂದು ಕೆಲವರು ಸಿಬ್ಬಂದಿಯೊಡನೆ ವಾದ ಮಾಡಿದರು‌.

Edited By : Manjunath H D
PublicNext

PublicNext

19/09/2022 09:22 pm

Cinque Terre

25.71 K

Cinque Terre

0

ಸಂಬಂಧಿತ ಸುದ್ದಿ