ಕಾರವಾರ: ಸ್ನೇಹಿತರೊಂದಿಗೆ ಪುರಾಣ ಪ್ರಸಿದ್ಧ ಗೋಕರ್ಣ ಪ್ರವಾಸಕ್ಕೆ ಬಂದಿದ್ದ ಯುವಕ ನಾಪತ್ತೆಯಾಗಿರುವ ಘಟನೆ ನಡೆದಿದೆ. ಶಿವಕುಮಾರ ಹುಚ್ಚಣ್ಣ (23) ನಾಪತ್ತೆಯಾದ ಯುವಕ. ಗುಲ್ಬರ್ಗಾದಿಂದ ಗೋಕರ್ಣ ಮಹಾಬಲೇಶ್ವರ ದರ್ಶನಕ್ಕೆ 9 ಯುವಕರ ತಂಡವೊಂದು ಪ್ರವಾಸಕ್ಕೆ ಬಂದಿತ್ತು.
ಬೆಳಗಿನ ಜಾವ ದೇವರ ದರ್ಶನ ಪಡೆಯಲು ಸಮುದ್ರ ಸ್ನಾನಕ್ಕೆಂದು ಇಳಿದಾಗ ಶಿವಕುಮಾರ್ ಕಡಲಿನಲ್ಲಿ ಮುಳುಗಿದ ನಾಪತ್ತೆಯಾಗಿದ್ದಾನೆ. ಸ್ಥಳಕ್ಕೆ ಕರಾವಳಿ ಕಾವಲು ಪಡೆ, ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯುವಕನಿಗಾಗಿ ಶೋಧ ಕಾರ್ಯ ಮುಂದುವರಿದಿದ್ದು, ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
13/09/2022 10:12 am