", "articleSection": "Accident", "image": { "@type": "ImageObject", "url": "https://prod.cdn.publicnext.com/s3fs-public/286525-1736599577-WhatsApp-Image-2025-01-11-at-6.16.07-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PraveenKarawar" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಕಾರವಾರ: ಇಲ್ಲಿನ ಬಿಣಗಾದ ಆದಿತ್ಯ ಬಿರ್ಲಾ ಕಂಪನಿಯಲ್ಲಿ ಶನಿವಾರ ರಾಸಾಯನಿಕ ಸೋರಿಕೆಯಾಗಿ ಘಟಕದ ಒಳಗಿದ್ದ 18 ಕಾರ್ಮಿಕರು ಅಸ್ವಸ್ಥಗೊಂಡಿದ್ದಾರೆ. ...Read more" } ", "keywords": "Karwar Gas Leak, Aditya Birla Company, Industrial Accident, Chemical Plant Leak, Karnataka Industrial Accident, Karwar News, Aditya Birla Group Accident, Worker Safety, Industrial Safety Measures, Gas Leak Incident.,Uttara-Kannada,Accident", "url": "https://publicnext.com/article/nid/Uttara-Kannada/Accident" } ಕಾರವಾರ: ಆದಿತ್ಯ ಬಿರ್ಲಾ ಕಂಪನಿಯಲ್ಲಿ ಅನಿಲ ಸೋರಿಕೆ, 18 ಕಾರ್ಮಿಕರು ಅಸ್ವಸ್ಥ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರವಾರ: ಆದಿತ್ಯ ಬಿರ್ಲಾ ಕಂಪನಿಯಲ್ಲಿ ಅನಿಲ ಸೋರಿಕೆ, 18 ಕಾರ್ಮಿಕರು ಅಸ್ವಸ್ಥ

ಕಾರವಾರ: ಇಲ್ಲಿನ ಬಿಣಗಾದ ಆದಿತ್ಯ ಬಿರ್ಲಾ ಕಂಪನಿಯಲ್ಲಿ ಶನಿವಾರ ರಾಸಾಯನಿಕ ಸೋರಿಕೆಯಾಗಿ ಘಟಕದ ಒಳಗಿದ್ದ 18 ಕಾರ್ಮಿಕರು ಅಸ್ವಸ್ಥಗೊಂಡಿದ್ದಾರೆ.

ಕಂಪನಿಯ ಎಚ್ಸಿಪಿ ಘಟಕದಲ್ಲಿ‌ ಮಧ್ಯಾನದ ವೇಳೆಗೆ ಕ್ಲೋರಿನ್ ಅನಿಲ ಸೋರಿಕೆಗೊಂಡಿದೆ. ಪರಿಣಾಮ ಕರ್ತವ್ಯದಲ್ಲಿದ್ದ ಕಾರ್ಮಿಕರು ಉಸಿರಾಟದ ತೊಂದರೆಯಿಂದಾಗಿ ಅಸ್ವಸ್ಥರಾಗಿದ್ದಾರೆ.

ಉತ್ತರ ಪ್ರದೇಶ ಹಾಗೂ ಬಿಹಾರ ಮೂಲದವರಾದ ನೀಲಕಂಠ, ಜಹಾನೂರ, ಕಮಲೇಶ ವರ್ಮಾ, ನಂದಕಿಶೋರ, ದೀಪು, ಅಜೀಜ್, ಕಲ್ಲು, ಸುಜನ್, ನಜೀದುಲ್ಲಾ, ಬೇಜನಕುಮಾರ್, ಕಿಶನ್ ಕುಮಾರ್ ಮೋಹಿತ ವರ್ಮಾ ‌ಸೇರಿದಂತೆ 12 ಕಾರ್ಮಿಕರು ಅಸ್ವಸ್ಥರಾಗಿದ್ದರು. ಅವರನ್ನು ತಕ್ಷಣ ಆಂಬುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ನಡೆದು ಒಂದು ಗಂಟೆಯ ಬಳಿಕ ಇನ್ನೋರ್ವ ಕಾರ್ಮಿಕನನ್ನು ಕೂಡ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಗಿದೆ. ಸ್ಥಳಕ್ಕೆ ಕಂಪನಿ ಅಧಿಕಾರಿಗಳು ಆಗಮಿಸಿದ್ದರು. ಅಲ್ಲದೇ ಇನ್ನು ನಾಲ್ಕು ಕಾರ್ಮಿಕರನ್ನು ಕಂಪನಿಯ ಆರೋಗ್ಯ ಘಟಕದಲ್ಲಿಯೇ ಚಿಕಿತ್ಸೆ ನೀಡಲಾಗಿದೆ. ಸದ್ಯ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆ ಬೆಳಕಿಗೆ ಬರುತ್ತಿದ್ದಂತೆ ಗ್ರಾಮಸ್ಥರು ಹಾಗೂ ತಾಲೂಕು ಆಡಳಿತ ಹಾಗೂ ನಗರಸಭೆಯ ಸದಸ್ಯರು ಕಂಪನಿಯ ಬಳಿ ಜಮಾವಣೆಗೊಂಡಿದ್ದರು. ಕಂಪನಿಯ ಅಕ್ಕಪಕ್ಕದಲ್ಲಿ ಗ್ರಾಮಗಳು ಹಾಗೂ ಶಾಲೆಗಳಿವೆ. ಘಟನೆ ನಡೆದು ಎರಡು ಗಂಟೆಯಾದರೂ ಸೈರನ್ ಹಾಕಿಲ್ಲ. ಇದರಿಂದಾಗಿ ಗ್ರಾಮಸ್ಥರು ಮತ್ತು ಶಾಲಾ ಮಕ್ಕಳಿಗೆ ತೊಂದರೆಯಾಗಲಿದೆ.

ಅಷ್ಟಾದರೂ ಅಧಿಕಾರಿಗಳು ಮಾತ್ರ ನಿರ್ಲಕ್ಷ್ಯ ವಹಿಸಿದ್ದಾರೆ. ಘಟಕದ ಒಳಗೆ ಇನ್ನು ಹಲವು ಕಾರ್ಮಿಕರು ಅಸ್ವಸ್ಥಗೊಂಡಿರುವ ಸಾಧ್ಯತೆ ಇದೆ. ಹೀಗಾಗಿ ಕೂಡಲೇ ಘಟಕವನ್ನು ಬಂದ್ ಮಾಡಬೇಕು, ಮಾರಕವಾಗಿರುವ ಕಂಪನಿಯನ್ನು ಮುಚ್ಚಬೇಕು, ಘಟಕದ ಮುಖ್ಯಸ್ಥರ ವಿರುದ್ಧ ಎಫ್ಐಆರ್ ದಾಖಲಿಸಬೇಕು ಎಂದು ಗ್ರಾಮಸ್ಥರು, ಯೂನಿಯನ್ ಸದಸ್ಯರು ಪ್ರತಿಭಟನೆ ನಡೆಸಿದರು.

Edited By : Shivu K
PublicNext

PublicNext

11/01/2025 06:16 pm

Cinque Terre

34.73 K

Cinque Terre

0

ಸಂಬಂಧಿತ ಸುದ್ದಿ