ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರಹ್ಮಾವರದಲ್ಲಿ ನಡೆದ ವಿಭಾಗೀಯ ಮಟ್ಟದ ಖೋ ಖೋ ಪಂದ್ಯಾಟದಲ್ಲಿ ಮೈಸೂರು.ಹಾಸನ ಮತ್ತು ಉಡುಪಿ ತಂಡಕ್ಕೆ ಪ್ರಶಸ್ತಿ

ಬ್ರಹ್ಮಾವರ: ಮೈಸೂರು ವಿಭಾಗೀಯ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಖೋ-ಖೋ ಪಂದ್ಯಾಟ 2022ರಲ್ಲಿ ಮೈಸೂರು, ಹಾಸನ ಮತ್ತು ಉಡುಪಿಯ ತಂಡಕ್ಕೆ ಪ್ರಶಸ್ತಿ .

ಬ್ರಹ್ಮಾವರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಮುಕ್ತಾಯಗೊಂಡ ಮೈಸೂರು ವಿಭಾಗೀಯ

ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಖೋ-ಖೋ ಪಂದ್ಯಾಟದಲ್ಲಿ ಮೈಸೂರು, ಹಾಸನ ಮತ್ತು ಉಡುಪಿಯ ತಂಡ ಪ್ರಶಸ್ತಿ ಗಳಿಸಿದೆ.

14ರ ವಯೋಮಾನದ ಬಾಲಕರ ವಿಭಾಗದಲ್ಲಿ ಹಾಸನ ತಂಡ ಪ್ರಥಮ, ಮೈಸೂರು ದ್ವಿತೀಯ ಸ್ಥಾನ ಪಡೆದರೆ, 14ರ ಬಾಲಕಿಯರ ವಿಭಾಗದಲ್ಲಿ ಮೈಸೂರು ಪ್ರಥಮ ಮತ್ತು ಹಾಸನ ದ್ವಿತೀಯ ಸ್ಥಾನ ಪಡೆದುಕೊಂಡವು.

17ರ ವಯೋಮಾನದ ಬಾಲಕರ ವಿಭಾಗದಲ್ಲಿ ಮೈಸೂರು ಪ್ರಥಮ, ಮಂಡ್ಯ ದ್ವಿತೀಯ ಸ್ಥಾನ ಪಡೆದರೆ, ಬಾಲಕಿಯರ ವಿಭಾಗದಲ್ಲಿ ಉಡುಪಿ ಪ್ರಥಮ ಮತ್ತು ಮೈಸೂರು ದ್ವಿತೀಯ ಸ್ಥಾನ ಪಡೆದುಕೊಂಡವು.

2 ದಿನ 4 ಅಂಗಣದಲ್ಲಿ ನಡೆದ ಹೊನಲು ಬೆಳಕಿನ ಪಂದ್ಯಾಟದಲ್ಲಿ ಮೈಸೂರು ವಿಭಾಗದ 32 ಶಾಲೆಯ 32 ತಂಡದಲ್ಲಿ 14 ವಯೋಮಾನದ ಬಾಲಕರ ಮತ್ತು ಬಾಲಕಿಯರ ತಲಾ 8 ತಂಡ ಮತ್ತು 17 ವಯೋಮಿತಿಯ ಬಾಲಕರ ಮತ್ತು ಬಾಲಕೀಯರ ತಲಾ 8 ತಂಡ ಆಗಮಿಸಿದ್ದು 150 ಕ್ರೀಡಾ ಅಧಿಕಾರಿಗಳು ಭಾಗವಹಿಸಿದ್ದರು.

ಮಾಜಿ ಕ್ರೀಡಾ ಸಚಿವ ಪ್ರಮೋಧ್ ಮದ್ವರಾಜ್ ಬಹುಮಾನ ವಿತರಣೆ ಮಾಡಿದರು. ಬ್ರಹ್ಮಾವರ ತಾಲೂಕು ತಹಶೀಲ್ದಾರ ರಾಜಶೇಖರ ಮೂರ್ತಿ ,ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಿನ್ಸಿಪಾಲ್ ರವೀಂದ್ರ ಉಪಾಧ್ಯಾ, ರೋಟರಿ ದಿನೇಶ್ ನಾಯರಿ, ಪಂಚಮಿ ಮೋಹನ್ ಶೆಟಿ, ಬಿರ್ತಿ ರಾಜೇಶ್ ಶೆಟ್ಟಿ, ಭಾಸ್ಕರ್ ರೈ, ಕ್ಷೇತ್ರ ಶಿಕ್ಷಣಾಧಿಕಾರಿ ರಂಗನಾಥ್ , ಪದ್ಮಾವತಿ, ಉಪ ಪ್ರಾಂಶುಪಾಲ ಬಿ.ಟಿ ನಾಯ್ಕ್ ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

11/10/2022 05:28 pm

Cinque Terre

7.47 K

Cinque Terre

0

ಸಂಬಂಧಿತ ಸುದ್ದಿ