ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ಕ್ರೀಡೆ ಮೂಲಕ ಸಮಾಜದ ಬಾಂದವ್ಯ ಬಲಿಷ್ಠ; ಸಚಿವ ಅರಗ ಜ್ಞಾನೇಂದ್ರ

ಕುಂದಾಪುರ: ಕ್ರೀಡೆಯ ಮುಖಾಂತರ ಸಮಾಜವನ್ನು ಒಂದುಗೂಡಿಸುವ ಕಾರ್ಯ ನಿಜಕ್ಕೂ ಶ್ಲಾಘನೀಯ ಹಾಗೇ ಕ್ರೀಡೆಯ ಮೂಲಕ ಬಾಂದವ್ಯಗಳು ಶೈಕ್ಷಣಿಕ, ಸಾಂಸ್ಕೃತಿಕವಾಗಿ ದೇವಾಡಿಗ ಸಮಾಜದಲ್ಲಿ ಬೆಳೆಯಲು ಸಹಾಯವಾಗುತ್ತದೆ ಎಂದು ಅರಗ ಜ್ಞಾನೇಂದ್ರ ಹೇಳಿದ್ದಾರೆ.

ಕುಂದಾಪುರ ಗಾಂಧಿ ಮೈದಾನದಲ್ಲಿ ಸುರೇಶ್ ಡಿ. ಪಡುಕೋಣೆ ಸವಿನೆನಪಿನಲ್ಲಿ ಬೈಂದೂರು ವಲಯ ದೇವಾಡಿಗ ಸಮಾಜ ಬಾಂಧವರ ದೇವಾಡಿಗ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಮಾತನಾಡಿದ ಗೃಹ ಸಚಿವರು ಕ್ರೀಡೆಯಿಂದ ಸಮುದಾಯಗಳು ಒಂದಾಗುತ್ತದೆ ಎಂದರು. ಈ ಕ್ರೀಡಾಕೂಟದಲ್ಲಿ ಗೃಹ ಸಚಿವರನ್ನು ಸನ್ಮಾನಿಸಿ ಗೌರವಿಸಲಾಗಿತು. ಈ ಸಂದರ್ಭದಲ್ಲಿ ಕ್ರೀಡಾಕೂಟ ಸಮಿತಿ ಅಧ್ಯಕ್ಷ ರಮೇಶ್ ದೇವಾಡಿಗ, ಕಾರ್ಯಧ್ಯಕ್ಷರಾದ ಶಂಕರ ಅಂಕದಕಟ್ಟೆ, ಪ್ರಧಾನ ಕಾರ್ಯದರ್ಶಿ ನಾಗರಾಜ್, ರಘುರಾಮ್ ದೇವಾಡಿಗ, ಚಂದ್ರಶೇಖರ್ ದೇವಾಡಿಗ, ಇನ್ನಿತರರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

24/04/2022 06:59 pm

Cinque Terre

1.58 K

Cinque Terre

0

ಸಂಬಂಧಿತ ಸುದ್ದಿ