ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಣಿಪಾಲ: ಆಸರೆ ಟ್ರಸ್ಟ್ ಗೆ ವಿಕ್ಟೋರಿಯಾ ಫುಟ್ ಬಾಲ್ ಅಕಾಡೆಮಿಯಿಂದ ವೀಲ್ ಚೇರ್ ಕೊಡುಗೆ

ಮಣಿಪಾಲ:ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಮತ್ತು ಅರ್ಚನಾ ಟ್ರಸ್ಟ್ ಜಂಟಿಯಾಗಿ ನಡೆಸುತ್ತಿರುವ ಆಸರೆ ಚಾರಿಟೇಬಲ್ ಟ್ರಸ್ಟ್ ನಲ್ಲಿ ಇಂದು ಮಕ್ಕಳಿಗಾಗಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ವಿಶೇಷ ಮಕ್ಕಳಿಗೆ ಮನರಂಜನೆಯ ಕಾರ್ಯಕ್ರಮದ ಜೊತೆಗೆ ವಿಕ್ಟೋರಿಯಾ ಫುಟ್ ಬಾಲ್ ಅಕಾಡೆಮಿ ವತಿಯಿಂದ ಆಸರೆ ಚಾರಿಟೇಬಲ್ ಟ್ರಸ್ಡ್ ಗೆ ವ್ಹೀಲ್ ಚೇರ್ ನೀಡುವ ಕಾರ್ಯಕ್ರಮ ಇದಾಗಿತ್ತು .ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಮತ್ತು ಅರ್ಚನಾ ಟ್ರಸ್ಟ್ ಜಂಟಿಯಾಗಿ ಆಸರೆ ಟ್ರಸ್ಟ್ ನ್ನು ನಡೆಸುತ್ತಿದೆ.2009 ರಲ್ಲಿ ಪ್ರಾರಂಭಗೊಂಡ ಟ್ರಸ್ಟ್ ನಲ್ಲಿ ಸದ್ಯ 46 ಮಕ್ಕಳಿದ್ದಾರೆ.ಆಸರೆ ಟ್ರಸ್ಟ್ ಕಳೆದ 12 ವರ್ಷಗಳಿಂದ ಹಲವು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಬಂದಿದೆ.ಇಂದು ಆಸರೆ ಟ್ರಸ್ಟ್ ಗೆ ವಿಕ್ಡೋರಿಯಾ ಫುಟ್ ಬಾಲ್ ಅಕಾಡೆಮಿಯಿಂದ ವೀಲ್ ಚೇರ್ ನೀಡುವ ಕಾರ್ಯಕ್ರಮ ನಡೆಯಿತು. ಮಾಹೆಯ ಕರ್ನಲ್ ಉಮಾಕಾಂತ್ ಸಿಂಗ್ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದರು.

ಇದೇ ವೇಳೆ ಫುಟ್ ಬಾಲ್ ಅಕಾಡೆಮಿಯ ಸಂಸ್ಥಾಪಕರು, ಉತ್ಸಾಹಿ ತರುಣ ತರುಣಿಯರಾದ ಕ್ಲೈವ್ ನೊಲನ್ ಮಾಸ್ಕರೇನಸ್ ಮತ್ತು ಮಿಲನಾ ಅವರು ವೀಲ್ ಚೇರ್ ನೀಡಿದ ನಂತರ ಆಸರೆ ಟ್ರಸ್ಟ್ ನ ಮಕ್ಕಳಿಗೆ ಉಚಿತ ಫುಟ್ ಬಾಲ್ ತರಬೇತಿ ನೀಡುವುದಾಗಿ ಕಾರ್ಯಕ್ರಮದಲ್ಲಿ ಹೇಳಿದರು.ಮಕ್ಕಳಿಗಾಗಿ ಏರ್ಪಡಿಸಿದ್ದ ಮನರಂಜನೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಕ್ಕಳು ಎಲ್ಲರ ಜೊತೆ ಬೆರೆತು ಖುಷಿ ಪಟ್ಟರು. ಮಾಹೆಯ ಎಸ್ಟೇಟ್ ಆಫೀಸರ್ ಜೈವಿಠಲ್ ಮತ್ತಿತರರು ಉಪಸ್ಥಿತರಿದ್ದರು.

Edited By : Nagaraj Tulugeri
Kshetra Samachara

Kshetra Samachara

01/03/2021 10:08 pm

Cinque Terre

2.39 K

Cinque Terre

0

ಸಂಬಂಧಿತ ಸುದ್ದಿ