ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೇರಳ: ದ. ವಲಯ ಜೂ. ಅಥ್ಲೆಟಿಕ್ಸ್; 100 ಮೀ. ಓಟದಲ್ಲಿ ಉಡುಪಿಯ ಅಂಕಿತಾಗೆ ಚಿನ್ನ, ಹೈಜಂಪ್ ನಲ್ಲಿ ಬೆಳ್ಳಿ, ಕಂಚು ಗೆದ್ದ ಶಶಾಂಕ್, ಪ್ರಶುಲ್

ಉಡುಪಿ: ಕೇರಳದ ಕ್ಯಾಲಿಕಟ್‌ನಲ್ಲಿ ನಡೆದ ದಕ್ಷಿಣ ವಲಯ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಅಲೆವೂರು ಶಾಂತಿನಿಕೇತನ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಅಂಕಿತಾ ದೇವಾಡಿಗ ಅವರು 100 ಮೀಟರ್ ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.

ಅವರು ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಶರತ್ ಎಚ್.ಎಸ್. ಹಾಗೂ ಅಜ್ಜರಕಾಡು ಕ್ರೀಡಾಂಗಣದಲ್ಲಿ ಕೋಚ್ ಅಬ್ಬಾಸ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.

ಶಾಂತಿ ನಿಕೇತನ ಶಾಲೆಯ ಶಶಾಂಕ್ ಬಿ. ಹಾಗೂ ಪ್ರಶುಲ್ ಪಿ. ಪೂಜಾರಿ ಹೈಜಂಪ್ ವಿಭಾಗದಲ್ಲಿ ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ವಿಜೇತರಿಗೆ ಶಾಲಾ ಸಂಚಾಲಕ ಅಲೆವೂರು ದಿನೇಶ್ ಕಿಣಿ ಹಾಗೂ ಮುಖ್ಯೋಪಾಧ್ಯಾಯಿನಿ ರೂಪಾ ಡಿ. ಕಿಣಿ ಅಭಿನಂದನೆ ಸಲ್ಲಿಸಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

27/02/2021 09:08 am

Cinque Terre

3.77 K

Cinque Terre

0

ಸಂಬಂಧಿತ ಸುದ್ದಿ