ಉಡುಪಿ: ಉಡುಪಿ ಜಿಲ್ಲಾ ಸವಿತಾ ಸಮಾಜ ಹಾಗೂ ಸವಿತಾ ಸಮಾಜ ವಿವಿದೋದ್ದೇಶ ಸೌಹಾರ್ದ ಸಹಕಾರಿ (ನಿ )ಉಡುಪಿ ಇವರ ಜಂಟಿ ಸಹಯೋಗದಲ್ಲಿ ಜಿಲ್ಲೆಯ ಕ್ಷೌರಿಕ ವೃತ್ತಿನಿರತರ ಸವಿತಾ ಸಮ್ಮಿಲನ ಕ್ರಿಕೆಟ್ ಪಂದ್ಯಾಟ ಕುಂದಾಪುರದ ಗಾಂಧಿ ಮೈದಾನದಲ್ಲಿ ಜರಗಿತು. ಗೋವಿಂದ ಭಂಡಾರಿ ಬನ್ನಂಜೆ ಗೌರವಾಧ್ಯಕ್ಷರು ಉಡುಪಿ ಜಿಲ್ಲಾ ಸವಿತಾ ಸಮಾಜ ಹಾಗೂ ಕೇಶವ ಭಂಡಾರಿ ಕಟಪಾಡಿ ಅತಿಥಿಗಳಾದ ಸತೀಶ್ ಭಂಡಾರಿ ಕಾಪು ಸಂಚಾಲಕರು ಜಿಲ್ಲಾ ಸವಿತಾ ಸಮಾಜ ನವೀನಚಂದ್ರ ಭಂಡಾರಿ ಮಣಿಪಾಲ ವಿಶ್ವನಾಥ್ ಭಂಡಾರಿ ನಿಂಜೂರು ಜಿಲ್ಲಾಧ್ಯಕ್ಷರು ಜಿಲ್ಲಾ ಸವಿತಾ ಸಮಾಜ ಇವರ ಅಧ್ಯಕ್ಷತೆಯಲ್ಲಿ ಪಂದ್ಯಾಟ ಉದ್ಘಾಟಿಸಿದರು.
ಜಿಲ್ಲೆಯ 16 ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಿದ್ದವು ರನ್ನರ್ಸ್ ಆಗಿ ಬ್ರಹ್ಮಾವರ ಫ್ರೆಂಡ್ಸ್ ಟ್ರೋಫಿಯೊಂದಿಗೆ ನಗದು 10000 ಹಾಗೂ ವಿನ್ನರ್ಸ್ ಆಗಿ ಕೋಟ ಯುವಸೇನೆ ಟ್ರೋಫಿಯೊಂದಿಗೆ ನಗದು 15000 ಸಮಾರೋಪ ಸಮಾರಂಭದಲ್ಲಿ ಕಡಂದಲೆ ಸುರೇಶ್ ಭಂಡಾರಿ ಮುಂಬೈ ಆಡಳಿತ ಮೊಕ್ತೇಸರರು ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಬಾರ್ಕೂರು ವಿಜೇತ ತಂಡಕ್ಕೆ ಬಹುಮಾನ ನೀಡಿದರು.ವಿಶ್ವನಾಥ್ ಭಂಡಾರಿ ನಿಂಜೂರು ಅಧ್ಯಕ್ಷತೆ ವಹಿಸಿದ್ದರು.
Kshetra Samachara
20/01/2021 06:54 pm