ಕುಂದಾಪುರ: ಕೋಟೇಶ್ವರದಲ್ಲಿ ನಡೆದ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಹೆಸ್ಕತ್ತೂರು ಸರ್ಕಾರೀ ಹಿರಿಯ ಪ್ರಾಥಮಿಕ ಶಾಲೆಯ ಏಳನೇ ವಿದ್ಯಾರ್ಥಿನಿ ಅನುಷ್ಕಾ ರನ್ನಿಂಗ್ನಲ್ಲಿ ಪ್ರಶಸ್ತಿ ಬಾಚಿಕೊಳ್ಳುವುದರ ಜೊತೆಗೆ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಪ್ರಾಥಮಿಕ ಶಾಲಾ ಮಕ್ಕಳ ಹೋಬಳಿ ಮಟ್ಟದ ಕ್ರೀಡಾಕೂಟವು ಕೋಟೇಶ್ವರದ ಕೆಪಿಎಸ್ ಶಾಲೆಯಲ್ಲಿ ನಡೆದಿತ್ತು. ಹೆಸಕತ್ತೂರು ಶಾಲೆಯ ವಿದ್ಯಾರ್ಥಿನಿ ಅನುಷ್ಕಾ 100 ಮೀ ಓಟದಲ್ಲಿ ಪ್ರಥಮ, 200 ಮೀ ಓಟದಲ್ಲಿ ಪ್ರಥಮ, 400 ಮೀ ಓಟದಲ್ಲಿ ದ್ವಿತೀಯ, 4x100 ಮೀ. ರಿಲೆಯಲ್ಲಿ ಪ್ರಥಮ ರ್ಸಥಾನ ಪಡೆಯುವುದರ ಮೂಲಕ ವೈಯುಕ್ತಿಕ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ನಾಗರಾಜ ಹಾಗೂ ಕುಸುಮ ದಂಪತಿಗಳ ಪುತ್ರಿಯಾದ ಅನುಷ್ಕಾ ಗ್ರಾಮೀಣ ಭಾಗದ ಪ್ರತಿಭೆ. ಈಕೆಗೆ ಸರ್ಕಾರೀ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಅಶೋಕ್ ತೆಕ್ಕಟ್ಟೆ ಮಾರ್ಗದರ್ಶನದಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ಸಂಜೀವ ಮೊಗವೀರ ತರಬೇತಿ ನೀಡಿದ್ದಾರೆ.
Kshetra Samachara
26/09/2022 05:54 pm