ಹೆಬ್ರಿ : ತಾಲೂಕಿನ ಮುನಿಯಾಲು ಕಾಡುಹೊಳೆ ಶ್ರೀ ಜಂಗಮೇಶ್ವರ ಮಠದಲ್ಲಿ ಭಾನುವಾರ ಅಯೋಧ್ಯೆಯ ಶ್ರೀ ರಾಮ ಮಂದಿರದ ನಿರ್ಮಾಣ ಕಾರ್ಯ ಸುಸೂತ್ರವಾಗಿ ನಡೆದು ದೇಶದ ಸುಭೀಕ್ಷೆಗಾಗಿ ಭಾನುವಾರ ಬೆಳಿಗ್ಗೆ 7 ರಿಂದ ಸಾಯಂಕಾಲ 7 ಘಂಟೆಯವರೆಗೆ ನಿರಂತರ ಶ್ರೀ ರಾಮನಾಮ ಸಂಕೀರ್ತನೆ ವಿವಿಧ ಧಾರ್ಮಿಕ ಕಾರ್ಯದೊಂದಿಗೆ ನೆರವೇರಿತು.
ಶ್ರೀರಾಮ ನಾಮ ಜಪ ಸಮಾರೋಪ ಸಮಾರಂಭದಲ್ಲಿ ತೀರ್ಥಹಳ್ಳಿ ಬಾಳಾಗಾರು ಶ್ರೀ ಮಧ್ವಾಚಾರ್ಯ ಸಂಸ್ಥಾನದ 108 ಶ್ರೀ ರಘುಭೂಷಣ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು.
ಇಂಧನ ಮತ್ತು ಕನ್ನಡ ಸಂಸ್ಕೃತಿ ಸಚಿವ ಸುನಿಲ್ ಕುಮಾರ್, ಮುನಿಯಾಲು ಗೋಧಾಮದ ಸಂಸ್ಥಾಪಕ ಜಿ.ರಾಮಕೃಷ್ಣ ಆಚಾರ್ ದಂಪತಿ ಸಹಿತ ಗಣ್ಯರು ಭೇಟಿ ನೀಡಿ ಜಪದಲ್ಲಿ ಪಾಲ್ಗೊಂಡರು. ಅರ್ಚಕ ರಾಘವೇಂದ್ರ ಭಟ್ ನೇತ್ರತ್ವದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಿತು. ಜಂಗಮೇಶ್ವರ ಮಠದ ಆಡಳಿತ ಮೊಕ್ತೇಸರ ಚಿರಂಜಿತ್ ಅಜಿಲ, ಮುಖಂಡ ದಿನೇಶ ಪೈ, ಜ್ಯೋತಿ ಹರೀಶ್ ಪೂಜಾರಿ, ಮಹಾಲಿಂಗೇಶ್ವರ ಭಜನಾ ಮಂಡಳಿಯ ಅಧ್ಯಕ್ಷರಾದ ಸಂತೋಷ ಪ್ರಭು, ಕುಸುಮ ಉಪಸ್ಥಿತರಿದ್ದರು.
Kshetra Samachara
10/10/2022 07:25 pm