ಉಡುಪಿ: ಇಂದು ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನದ ಸುಬ್ರಮಣ್ಯ ಹಾಗು ನಾಗದೇವರ ಗುಡಿಯ ಶಿಲಾನ್ಯಾಸ ಕಾರ್ಯಕ್ರಮವು ಸಗ್ರಿ ಗೋಪಾಲ ಕೃಷ್ಣ ಸಾಮಗ ನಾಗಪಾತ್ರಿಗಳಿಂದ ನೆರವೇರಿತು .ಮುಖ್ಯ ಅತಿಥಿಗಳಾಗಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಟ್ಟಾರು ರತ್ನಾಕರ ಹೆಗ್ಡೆ, ಕಡಿಯಾಳಿ ಶ್ರೀ ಮಹಿಷಮರ್ಧಿನಿ ದೇವಸ್ಥಾನದ ವ್ಯವಸ್ಥಾಪನ ಮಂಡಳಿ ಅಧ್ಯಕ್ಷರಾದ ಡಾ. ರವಿರಾಜ ಆಚಾರ್ಯ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಶ್ರೀ ನಾಗೇಶ್ ಹೆಗ್ಡೆ, ಜಿಲ್ಲಾ ಧಾರ್ಮಿಕ ಪರಿಷತ್ ನ ಸದಸ್ಯರಾದ ಯು. ಮೋಹನ ಉಪಾಧ್ಯಾಯ, ಉಪಸ್ಥಿತರಿದ್ದರು.ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ .ರಾಘವೇಂದ್ರ ಕಿಣಿ ಕಾರ್ಯಕ್ರಮ ನಿರ್ವಹಿಸಿ ಸತೀಶ್ ಕುಲಾಲ್ ವಂದಿಸಿದರು.
ಈ ಸಂದರ್ಭದಲ್ಲಿ ಕಡಿಯಾಳಿ ಕಾತ್ಯಾಯನಿ ಮಂಟಪದ ಪರವಾಗಿ ಕೆ .ಮುರಳಿಕೃಷ್ಣ ಉಪಾಧ್ಯಾಯ 5 ಲಕ್ಷ ರೂಪಾಯಿ, ಶ್ರೀದೇವರ ಆರ್ಚಕರಾದ ಕಡಿಯಾಳಿ ಕೆ. ರತ್ನಾಕರ ಉಪಾಧ್ಯಾಯ 1 ಲಕ್ಷ ರೂಪಾಯಿ, ಕಡಿಯಾಳಿಯ ಜೀವರತ್ನ ದೇವಾಡಿಗ 56,565 ರೂಪಾಯಿ ಮೊತ್ತವನ್ನು ಜೀರ್ಣೋದ್ಧಾರ ಕಾರ್ಯಕ್ಕೆ ನೀಡಿದರು.
Kshetra Samachara
18/02/2021 09:32 pm