ಉಡುಪಿ: ಪೇಜಾವರ ಶ್ರೀಗಳು ಇಂದು ದಿನಪೂರ್ತಿ ಅಯೋಧ್ಯೆ ಶ್ರೀ ರಾಮ ಮಂದಿರದ ದೇಣಿಗೆ ಸಂಗ್ರಹ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.
ಬೆಳಗ್ಗಿನಿಂದ ಮಧ್ಯಾಹ್ನದ ವರೆಗೆ ಬೆಂಗಳೂರು, ನಂತರ ತುಮಕೂರಿನಲ್ಲಿ ಶ್ರೀಕೃಷ್ಣ ಮಠ ಹಾಗೂ ತುಮಕೂರಿನ ವಿವಿಧ ಬಡಾವಣೆಗಳಲ್ಲಿ ಸುಮಾರು 10 ಕ್ಕೂ ಹೆಚ್ಚು ಮನೆಗಳಿಗೆ ಭೇಟಿ ಕೊಟ್ಟು ದೇಣಿಗೆ ಸ್ವೀಕರಿಸಿದರು. ಸಿದ್ದಗಂಗಾ ಶ್ರೀಗಳ ಆಹ್ವಾನದ ಮೇರೆಗೆ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಗೌರವ ಸ್ವೀಕರಿಸಿದರು ಹಾಗೂ ಅಲ್ಲಿನ ವಿದ್ಯಾರ್ಥಿಗಳಿಗೆ ಧರ್ಮಸಂದೇಶ ನೀಡಿದರು.
Kshetra Samachara
24/01/2021 10:48 pm