ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು ನೂತನ ತಹಶೀಲ್ದಾರರಾಗಿ ಶ್ರೀಕಾಂತ್ ಎಸ್ ಹೆಗ್ಗಡೆ ಅಧಿಕಾರ ಸ್ವೀಕಾರ

ಬೈಂದೂರ್: ಬೈಂದೂರು ತಾಲೂಕಿನ ನೂತನ ತಹಶೀಲ್ದಾರರಾಗಿ ಶ್ರೀಕಾಂತ ಎಸ್, ಹೆಗ್ಗಡೆ ಶುಕ್ರವಾರ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಮೂಲತಃ ತೀರ್ಥಹಳ್ಳಿ ತಾಲೂಕಿನವರಾದ ಶ್ರೀಕಾಂತ್ ಅವರು ಈ ಹಿಂದೆ ಹೊಸನಗರ ತಾಲೂಕಿನ ಉಪ ತಹಸೀಲ್ದಾರರಾಗಿ ಕಾರ್ಯ ನಿರ್ವಹಿಸುತ್ತಿದ್ದು. ಬಳಿಕ ಗ್ರೇಡ್ -2 ತಹಶೀಲ್ದಾರರಾಗಿ ಭಕ್ತಿ ಹೊಂದಿದ್ದರು.

ಈ ಮೊದಲು ಶೋಭಾ ಲಕ್ಷ್ಮೀ ಹೆಚ್, ಎಸ್, ಅವರ ವರ್ಗಾವಣೆಯ ಬಳಿಕ ತೆರವಾದ ಸ್ಥಾನಕ್ಕೆ ಶ್ರೀಕಾಂತ್ ಎಸ್ ಅವರು ನೇಮಕಗೊಂಡಿದ್ದಾರೆ. ಈ ತನಕ ಕುಂದಾಪುರ ತಹಶೀಲ್ದಾರ್ ಕಿರಣ್ ಗೌರಯ್ಯ ಬೈಂದೂರು ತಾಲೂಕಿನ ಹೆಚ್ಚುವರಿ ಜವಾಬ್ದಾರಿ ವಹಿಸಿಕೊಂಡಿದ್ದರು.

Edited By : PublicNext Desk
Kshetra Samachara

Kshetra Samachara

10/09/2022 05:32 pm

Cinque Terre

1.14 K

Cinque Terre

0

ಸಂಬಂಧಿತ ಸುದ್ದಿ