ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ಧಾರ್ಮಿಕ ದತ್ತಿ ಇಲಾಖೆಗೆ ಮೂಲ ದಾಖಲೆ ನೀಡದೆ ಶ್ರೀ ಕುಂದೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರಾಗಿ ಸೇರಿಕೊಂಡ ಜಯನಂದ ಖಾರ್ವಿ ವಿರುದ್ಧ ದೂರು

ಕುಂದಾಪುರ : ಕುಂದಾಪುರದ ಪುರಾಣ ಪ್ರಸಿದ್ಧ ಶ್ರೀ ಕುಂದೇಶ್ವರ ದೇವಾಲಯದ ನೂತನ ವ್ಯವಸ್ಥಾಪನಾ ಸಮಿತಿ ರಚನೆಯ ಬಗ್ಗೆ ಇದೀಗ ಅಪಸ್ವರ ಎದ್ದಿದೆ. ಒಂಭತ್ತು ಮಂದಿ ಸದಸ್ಯರಿರುವ ವ್ಯವಸ್ಥಾಪನಾ ಸಮಿತಿಯಲ್ಲಿ ಓರ್ವ ಸದಸ್ಯರು ಅರ್ಜಿ ಸಲ್ಲಿಸುವಾಗ ಸತ್ಯ ಮರೆಮಾಚಿದ್ದಾರೆ ಎಂದು ಕುಂದಾಪುರ ಉಪವಿಭಾಗಾಧಿಕಾರಿಗಳಿಗೆ ದಿನಾಂಕ 19 ರಂದು ದೂರು ಸಲ್ಲಿಕೆಯಾಗಿದೆ.

ಶ್ರೀ ಕುಂದೇಶ್ವರ ದೇವಳದ ಸಮಸ್ತ ಭಕ್ತಾದಿಗಳು ಕೆಲವರು ಸಹಿ ಮಾಡಿ ಲಿಖಿತ ದೂರು ನೀಡಲಾಗಿದೆ.

ದೂರಿನಲ್ಲಿ ವಿವರಿಸಲಾದಂತೆ, ಖಾರ್ವಿ ಸಮುದಾಯದ ಜಯಾನಂದ ಖಾರ್ವಿ ಎನ್ನುವ ವ್ಯಕ್ತಿ ಮುಜರಾಯಿ ಇಲಾಖೆಗೆ ಅರ್ಜಿ ಸಲ್ಲಿಸುವಾಗ ಅಗತ್ಯ ವಿಷಯಗಳನ್ನು ನೀಡದೆ ಸತ್ಯ ಮರೆಮಾಚಿದ್ದಾರೆ ಎಂದು ದೂರಲಾಗಿದೆ. ಇದರಿಂದಾಗಿ ಸಮುದಾಯದ ಯಾರಾದರೊಬ್ಬ ವ್ಯಕ್ತಿಯು ಕಾನೂನುಬದ್ಧ ಅರ್ಹತೆಯಿಂದ ಸದಸ್ಯನಾಗುವ ಅವಕಾಶದಿಂದ ವಂಚಿತನಾಗಿದ್ದಾರೆ.

Edited By : PublicNext Desk
Kshetra Samachara

Kshetra Samachara

20/08/2022 09:58 pm

Cinque Terre

1.06 K

Cinque Terre

0

ಸಂಬಂಧಿತ ಸುದ್ದಿ