ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು:ಸರಕಾರದ ಅನುದಾನದ ಕೊರತೆಯಿಂದ ಕುಂಟುತ್ತ ಸಾಗುತ್ತಿರುವ ನೂತನ KSRTC ನಿಲ್ದಾಣದ ಕಾಮಗಾರಿ !

ಬೈಂದೂರು: ಕಳೆದ 5 ವರ್ಷ ದ ಹಿಂದೆ ಅವತ್ತಿನ ಮಾಜಿ ಶಾಸಕ ಹಾಗೂ KSRTC ನಿಗಮದ ಅಧ್ಯಕ್ಷರಾದ ಗೋಪಾಲ್ ಪೂಜಾರಿ ಅವರು ಶಂಕು ಸ್ಥಾಪನೆ ಮಾಡಿದ್ದರು.ನಂತರ ಬಂದ BM ಸುಕುಮಾರ್ ಶೆಟ್ಟಿಯವರು ಸಾರಿಗೆ ಸಚಿವರಿಂದ ಇದನ್ನ ಪುನಃ ಶಂಕು ಸ್ಥಾಪನೆ ಮಾಡಿಸಿದ್ದರು.

ಆದರೂ ಬೈಂದೂರು KSRTC ಬಸ್ ಸ್ಟ್ಯಾಂಡ್ ಕಾಮಗಾರಿ ಇನ್ನೂ ಮುಕ್ತಾಯ ಆಗಿಲ್ಲ. ಇಲ್ಲಿನ ಜನತೆಗೆ ನೂತನ KSRTC ಬಸ್ ಸ್ಟ್ಯಾಂಡ್ ನೋಡುವ ಭಾಗ್ಯ ಇಲ್ಲದಂತಾಗಿದೆ. ಕೂಡಲೇ ವೇಗವಾಗಿ ಕಾಮಗಾರಿ ಆರಂಭಿಸ ಬೇಕೆಂದು ಬೈಂದೂರಿನ ಪ್ರಜ್ಞಾವಂತ ನಾಗರಿಕರು ಶಾಸಕರನ್ನು ಒತ್ತಾಯಿಸಿದ್ದಾರೆ.

ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣಕ್ಕೆ ಅಗತ್ಯವಾಗಿರುವ ಬಸ್ ಗಳ ಓಡಾಡುವ ಸ್ಥಳದ ಕಾಂಕ್ರೀಟಿಕರಣ ಇನ್ನೂ ಆಗಿಯೇ ಇಲ್ಲ.

ಕಟ್ಟಡದ ಸ್ಲ್ಯಾಬಿನ ಮೇಲ್ಮೈಗೆ ಶಾಶ್ವತವಾದ, 'ಸುಸಜ್ಜಿತವಾದ, 'ವಾಟರ್ ಪ್ರೂಫ್ ಅಥವಾ ತಗಡಿನ ಮಾಡು' ಅಳವಡಿಕೆಯ ಅಗತ್ಯತೆ ಇದೆ.

ಮಳೆ ನೀರು ಹರಿದು ಹೋಗುವ ಚರಂಡಿಯ ವ್ಯವಸ್ಥೆ. ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯು ಅತ್ಯಗತ್ಯವಾಗಿದೆ.

ಹಾಗಾಗಿಯೇ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರು ಹಾಗೂ ಬೈಂದೂರು ಕ್ಷೇತ್ರದ ಶಾಸಕರಾಗಿರುವ ಶ್ರೀ.ಬಿ.ಎಮ್.ಸುಕುಮಾರ ಶೆಟ್ಟಿಯವರು ಬೈಂದೂರು ನೂತನ ಕೆ.ಎಸ್.ಆರ್.ಟಿ.ಸಿ.ಬಸ್ ನಿಲ್ದಾಣದ ಮೂಲ ಸೌಕರ್ಯಗಳ ಅನುದಾನದ ವ್ಯವಸ್ಥೆಯನ್ನು ಮಾಡಿ, ಅತ್ಯಂತ ಶೀಘ್ರವಾಗಿ ಬಸ್ ನಿಲ್ದಾಣದ ಕಾಮಗಾರಿಯನ್ನು ಸಂಪೂರ್ಣಗೊಳಿಸಿಬೇಕೆಂದು ಬೈಂದೂರು ಹಿತರಕ್ಷಣಾ ವೇದಿಕೆ ಅಧ್ಯಕ್ಷ ಜಗದೀಶ ಪಟವಾಲ್ ಹಾಗೂ ಸಾರ್ವಜನಿಕ ಸಂಘ ಸಂಸ್ಥೆಗಳು ಒತ್ತಾಯಿಸಿದೆ.

Edited By : PublicNext Desk
Kshetra Samachara

Kshetra Samachara

05/04/2022 03:56 pm

Cinque Terre

1.48 K

Cinque Terre

0

ಸಂಬಂಧಿತ ಸುದ್ದಿ