ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು : ಡಾ. ಭಾರತಿ ಮರವಂತೆಗೆ "ರಂಗವಲ್ಲಿ ಕುಸುಮಾಂಜಲಿ" : ರಾಜ್ಯ ಪ್ರಶಸ್ತಿ.

ಬೈಂದೂರು :ಡಾ. ಭಾರತಿ ಮರವಂತೆ ಯವರಿಗೆ ರಂಗವಲ್ಲಿ ಕಲಾಕ್ಷೇತ್ರದ ಉನ್ನತ ಮಟ್ಟದ ಸಾಧನೆಗಾಗಿ ರಂಗವಲ್ಲಿ ಕುಸುಮಾಂಜಲಿ ರಾಜ್ಯ ಪ್ರಶಸ್ತಿಯನ್ನು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ 21-03-2022 ರಂದು ಬೀದರ್ ನಲ್ಲಿ ಡಾ. ಎಂ.ಜೆ .ದೇಶಪಾಂಡೆ ಇವರ 70ನೇಯ ಹುಟ್ಟು ಹಬ್ಬದ ದಿನಾಚರಣೆಯ ಪ್ರಯುಕ್ತ ಪ್ರಶಸ್ತಿ ಪ್ರದಾನ ಮಾಡಲಾಗಿದೆ .

ಈ ಸಂದರ್ಭದಲ್ಲಿ ರಾಜ್ಯ ಮಟ್ಟದ ಮಹಿಳಾ ಕವಿಗೋಷ್ಠಿ ಮತ್ತು ಸಾಧಕರಿಗೆ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭವು ಮಂದಾರ ಕಲಾವಿದರ ವೇದಿಕೆ (ರಿ) ಬೀದರ್ ಈ ಸಂಸ್ಥೆಯ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದೆ .

ಡಾ. ಭಾರತಿ ಮರವಂತೆ ಯವರು ಕಲಾವಿದರಾಗಿ ಬೃಹತ್ ಗಾತ್ರದ ರಂಗೋಲಿ ಕಲಾ ಪ್ರದರ್ಶನ,ಪ್ರಾತ್ಯಕ್ಷಿಕೆ,ವಿದ್ಯಾರ್ಥಿಗಳಿಗೆ ತರಬೇತಿ,ರಂಗವಲ್ಲಿ ಪೈಂಟಿಂಗ್,ಲೇಖಕರಾಗಿ ಬರವಣಿಗೆ, 13 ಕ್ಕೂ ಹೆಚ್ಚು ಕೃತಿಗಳ ಪ್ರಕಟಣೆ, ಶ್ರೀ . ರಂಗೋಲಿ,ಪತ್ರಿಕೆಯ ಸಂಪಾದಕಿ ರಂಗೋಲಿ ಕಲೆ ಮತ್ತು ಜಾನಪದ ಚಿತ್ತಾರಗಳ ಸಂಶೋಧನ ಕ್ಷೇತ್ರದ ಕೆಲಸಗಳನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ ಎಂದು ಮಂದಾರ ಕಲಾವಿದರ ಸಾಹಿತಿಗಳಾದ ಡಾ.ಎಂ .ಜಿ ದೇಶಪಾಂಡೆ ಬೀದರ್ ಇವರು ತಿಳಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

02/04/2022 11:29 am

Cinque Terre

1.38 K

Cinque Terre

0

ಸಂಬಂಧಿತ ಸುದ್ದಿ