ಉಪ್ಪುಂದ: ಉದ್ಯೋಗಕ್ಕಾಗಿ ಮುಂಬೈಗೆ ಹೋಗಿದ್ದ ನನಗೆ ಊರಿನಲ್ಲಿ ನಿರುದ್ಯೋಗಿಯಾಗಿದ್ದ ಹಲವಾರು ಯುವಕರ ಬಗ್ಗೆ ಚಿಂತಿಸಿ ಮತ್ತೆ ಊರಿಗೆ ಬಂದು ಉದ್ಯಮ ಆರಂಭಿಸುವ ಮೂಲಕ ನೂರಾರು ಗ್ರಾಮಣ ಭಾಗದ ಕೈಗಳಿಗೆ ಉದ್ಯೋಗ ನೀಡಿರುವ ಹೆಮ್ಮೆ ಇದೆ ಎಂದು ಉದ್ಯಮಿ. ಸುಮುಖ ಸರ್ಜಿಕಲ್ಸ್ ಇಂಡಿಯಾ ಪ್ರೈ.ಲಿ. ಸಂಸ್ಥೆಯ ನಿರ್ದೇಶಕ ಯು ಪಾಂಡುರಂಗ ಪಡಿಯಾರ್ ಹೇಳಿದರು.
ಅವರು ಉಪ್ಪುಂದದ ಜೇಸೀ ಸಪ್ತಾಹ ೨೦೨೨ರಲ್ಲಿ ಕೊಡಮಾಡಿದ ಸಾಧನಶ್ರೀ ಉದ್ಯಮ ರತ್ನ ಪ್ರಶಸ್ತಿ ಹಾಗೂ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಮಾಜೀ ಜಿಲ್ಲಾ ಪಂಚಾಯತ್ ಸದಸ್ಯ ಬಾಬು ಹೆಗ್ಡೆಯವರು ಪ್ರಶಸ್ತಿ ನೀಡಿ ಗೌರವಿಸಿದರು. ಸುಮುಖ ಗ್ರೂಪ್ ಆಫ್ ಇಂಡಸ್ಟ್ರೀಸ್ ನ ಮ್ಯಾನೇಜಿಂಗ್ ಡೈರೆಕ್ಟರ್ ಬಿ.ಎಸ್.ಸುರೇಶ್ ಶೆಟ್ಟಿ, ಯುವ ಉದ್ಯಮಿ ನಿತಿನ್ ನಾರಾಯಣ್ ಹಾಗೂ ಉಪ್ಪುಂದ ಜೇಸೀಸ್ ಪದಾಧಿಕಾರಿಗಳು ಉಪಸ್ಥಿತರಿದ್ದರು.
Kshetra Samachara
20/09/2022 12:49 pm