ಕಾರ್ಕಳ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ 72ನೇ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲು ಬಿಜೆಪಿ ಸಿದ್ಧತೆ ಮಾಡಿಕೊಂಡಿದ್ದು ಈ ನಿಟ್ಟಿನಲ್ಲಿ ಅವರ ಜನ್ಮದಿನವಾದ ಸೆಪ್ಟೆಂಬರ್ 17ರಿಂದ ಅಕ್ಟೋಬರ್ 2ರವರೆಗೆ ಸೇವಾ ಪಾಕ್ಷಿಕ ಎನ್ನುವ ಕಾರ್ಯಕ್ರಮದಡಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಉಡುಪಿ ಜಿಲ್ಲಾ ಬಿಜೆಪಿ ವಕ್ತಾರ ರಾಘವೇಂದ್ರ ಕಿಣಿ ಹಾಗೂ ಕಾರ್ಕಳ ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ್ ಹೆಗ್ಡೆ ಜಂಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಅವರು ಶುಕ್ರವಾರ ಕಾರ್ಕಳ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಬಲಿಷ್ಠ ಭಾರತ ನಿರ್ಮಾಣಕ್ಕಾಗಿ ಶ್ರಮಿಸುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿಕೊಳ್ಳಲು ನಮಗೆ ಹೆಮ್ಮೆ ಎನಿಸುತ್ತದೆ ಎಂದರು. ಈ ನಿಟ್ಟಿನಲ್ಲಿ 15 ದಿನಗಳ ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಯೋಜನೆಯನ್ನು ರೂಪಿಸಲಾಗಿದೆ ಎಂದರು.
ಸೇವಾ ಪಾಕ್ಷಿಕ ಎನ್ನುವ ವಿಶೇಷ ಕಾರ್ಯಕ್ರಮದಡಿ ಪ್ರಮುಖ 13 ಸೇವಾ ಕಾರ್ಯಗಳನ್ನು ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.
ಸೆಪ್ಟೆಂಬರ್ 17 ರಿಂದ 18ರವರೆಗೆ ರಕ್ತದಾನ ಶಿಬಿರ, ಸೆಪ್ಟೆಂಬರ್ 17ರಿಂದ ಅಕ್ಟೋಬರ್ 2 ರವರೆಗೆ ಜೀವ ರಕ್ಷಕ ಲಸಿಕ ಅಭಿಯಾನ, ಸೆಪ್ಟೆಂಬರ್ 20 ರಿಂದ 21 ರವರೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸಾಧನೆಯ ಯಶೋಗಾಥೆಯನ್ನು ಬಿಂಬಿಸುವ ಜೀವನ ಚರಿತ್ರೆ ಪ್ರದರ್ಶನ, ಸೆಪ್ಟೆಂಬರ್ 21ರಿಂದ 22ರ ವರೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ, ಸಪ್ಟೆಂಬರ್ 22 ರಿಂದ 23ರ ವರೆಗೆ ಅರಳಿ ಮರ ನೆಡುವ ಅಭಿಯಾನ, ಸೆಪ್ಟೆಂಬರ್ 24 ರಂದು 25 ರವರೆಗೆ ಆರ್ ಎಸ್ ಎಸ್ ಸಂಸ್ಥಾಪಕ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಜಯಂತಿ ಅಂಗವಾಗಿ ಕಮಲೋತ್ಸವ, ಸಪ್ಟೆಂಬರ್ 25 ರಿಂದ 29 ರವರೆಗೆ ಬಿಜೆಪಿ ಸರಕಾರದಿಂದ ವಿವಿಧ ಯೋಜನೆಗಳನ್ನು ಪಡೆದ ಫಲಾನುಭವಿಗಳ ಜತೆ ಸಭೆ, ಸೆಪ್ಟೆಂಬರ್ 26 ರಿಂದ 27ರವರೆಗೆ ಸ್ವಾತಂತ್ರ್ಯ ದೊರೆತು 75 ವರ್ಷದ ಅಂಗವಾಗಿ 75 ಸರೋವರಗಳ ಸ್ವಚ್ಚತಾ ಅಮೃತ ಸರೋವರ ಕಾರ್ಯಕ್ರಮ, ಸೆಪ್ಟೆಂಬರ್ 28ರಿಂದ 29ರ ವರೆಗೆ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವ ಅಂಗನವಾಡಿಯ ಸಿಬ್ಬಂದಿಗಳಿಗೆ ಗೌರವ ಸಮರ್ಪಣೆ ಕಾರ್ಯಕ್ರಮ ಅಂಗನವಾಡಿ ಸೇವಾ ದಿವಸ್ ಆಚರಣೆ, ಸೆಪ್ಟೆಂಬರ್ 30ರಂದು ಶಾಲಾ ಮಕ್ಕಳಿಗೆ ಉಚಿತ ಬ್ಯಾಗ್ ವಿತರಣಾ ಅಭಿಯಾನ, ಸೆಪ್ಟೆಂಬರ್ 30ರಂದು ಕ್ಷಯ ರೋಗ ನಿರ್ಮೂಲನಾ ಅಭಿಯಾನ ಹಾಗೂ ಅಕ್ಟೋಬರ್ 2 ಗಾಂಧಿ ಜಯಂತಿ ದಿನ ದ ಅಂಗವಾಗಿ ಸ್ವಚ್ಛತಾ ಅಭಿಯಾನ ಹಾಗೂ ಖಾದಿ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಂಟೀ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಬಿಜೆಪಿ ಸಹ ಸಂಚಾಲಕ ಶಿವಕುಮಾರ್ ಕಾರ್ಕಳ ಬಿಜೆಪಿ ವಕ್ತಾರ ಹರೀಶ ಶೆಣೈ, ಬಿಜೆಪಿ ಮುಖಂಡರಾದ ರವೀಂದ್ರ ಮಡಿವಾಳ, ಬೋಳ ಜಯರಾಮ ಸಾಲ್ಯಾನ್ ಮುಂತಾದವರು ಉಪಸಿತರಿದ್ದರು.
Kshetra Samachara
16/09/2022 07:41 pm