ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ:ಅಡುಗೆ ಅನಿಲದ ಬೆಲೆ ಮತ್ತೆ 50 ರೂ ಏರಿಕೆ: ಕೆಪಿಸಿಸಿ ಪ್ಯಾನಲಿಸ್ಟ್ ವೆರೋನಿಕಾ ಕಾರ್ನೆಲಿಯೋ ಆಕ್ರೋಶ

ಉಡುಪಿ: ಅಡುಗೆ ಅನಿಲದ ಮೇಲೆ ಇಂದಿನಿಂದ .50/-ರೂ. ಬೆಲೆ ಏರಿಕೆ ಮಾಡಿ ಬಿಜೆಪಿ ಸರಕಾರ ಜನರ ಗಾಯದ ಮೇಲೆ ಬರೆ ಎಳೆದಿದೆ ಎಂದು ಕೆಪಿಸಿಸಿ ಪ್ಯಾನಲಿಸ್ಟ್ ವೆರೋನಿಕಾ ಕಾರ್ನೆಲಿಯೋ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜನ ಆರ್ಥಿಕ ಸಂಕಷ್ಟದಲ್ಲಿ ಇರುವಾಗ ದಿನನಿತ್ಯ ಬಳಕೆಯ ಅಡುಗೆ ಅನಿಲದ ಬೆಲೆಯನ್ನು ಏಕಾಏಕಿ 50 ರೂ ಏರಿಸಿರುವುದು ಖಂಡನೀಯ. ಈಗಾಗಲೇ ಒಂದು ಸಿಲಿಂಡರ್ ಗೆ 1020 ರು ತೆರುತ್ತಿದ್ದು ಇನ್ನು ಮುಂದೆ 1070 ತೆರಬೇಕಾಗುತ್ತೆ. ಜನ ಕೆಲಸಗಳಿಲ್ಲದೆ ಪರದಾಡುತ್ತಿದ್ದಾರೆ.

ಇಂತಹ ಸಮಯದಲ್ಲಿ ಬೆಲೆ ಏರಿಸುವ ಸರಕಾರಕ್ಕೆ ಕಣ್ಣು ಕಿವಿ ಯಾವುದೂ ಇಲ್ಲವೇ? ಜನರಿಂದ ಆಯ್ಕೆಯಾದ ಸರಕಾರ ಯಾಕೆ ಜನರನ್ನು ಈ ರೀತಿ ಲೂಟಿ ಮಾಡುತ್ತಿದೆ ಎಂದು ಪ್ರಶ್ನಿಸಿದ್ದಾರೆ.

ಮಾಧ್ಯಮ ವರದಿಗಳ ಪ್ರಕಾರ ನಿರುದ್ಯೋಗ ಸಮಸ್ಯೆ 7.8% ಗೆ ತಲುಪಿದ್ದು ಗರಿಷ್ಠ ಏರಿಕೆ ಕಂಡಿದೆ. ಮಳೆಗಾಲ ಆರಂಭವಾಗಿದ್ದು ಜನ ಒಪ್ಪುತ್ತಿನ ಊಟ ಕ್ಕೇ ಕಷ್ಟಪಡುತ್ತಿರುವಾಗ ಈ ರೀತಿಯ ಬೆಲೆ ಏರಿಕೆ ಜನರ ತಾಳ್ಮೆಯನ್ನು ಪರೀಕ್ಷಿಸುತ್ತಿದೆ. ಸರಕಾರ ತಕ್ಷಣ ಈ ಬೆಲೆಯನ್ನು ಇಳಿಕೆ ಮಾಡಿ ಜನರನ್ನು ನೆಮ್ಮದಿಯಿಂದ ಬದುಕಲು ಬಿಡಬೇಕಾಗಿ ಆಗ್ರಹಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

06/07/2022 04:37 pm

Cinque Terre

1.3 K

Cinque Terre

0

ಸಂಬಂಧಿತ ಸುದ್ದಿ