ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ‌"ಆರೆಸ್ಸೆಸ್ ಚಡ್ಡಿ ಎಂದರೆ ಸಿದ್ದರಾಮಯ್ಯಗೆ ಭೀತಿ"; ಸಚಿವ ಕೋಟ ಚಾಟಿ

ಆರೆಸ್ಸೆಸ್ ಚಡ್ಡಿ ಬಗ್ಗೆ ಸಿದ್ದರಾಮಯ್ಯ ಭಯಭೀತರಾಗಿದ್ದಾರೆ ಎಂದು ಉಡುಪಿಯಲ್ಲಿಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗ ಸಚಿವ ಕೋಟ ಶ್ರೀನಿವಾಸ ಪೂಜಾರಿ ವ್ಯಂಗ್ಯವಾಡಿದ್ದಾರೆ.

ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಚಡ್ಡಿ ಸುಡಲು ಹೊರಟಿರುವ ಸಿದ್ದರಾಮಯ್ಯ ಬಗ್ಗೆ ಮರುಕ ಪಡಬೇಕು. ಆರ್ ಎಸ್ ಎಸ್ ನ್ನು ನೆಹರೂ ಅವರೇ ಪ್ರಶಂಸಿಸಿದ್ದರು. ಆರ್ ಎಸ್ ಎಸ್ ಗೆ ಗಣರಾಜ್ಯೋತ್ಸವ ಪಥಸಂಚಲನಕ್ಕೆ ಅವರು ಅವಕಾಶ ಮಾಡಿಕೊಟ್ಟಿದ್ದರು.

ಕಾಂಗ್ರೆಸ್ ನ ಮತ್ತೋರ್ವ ಹಿರಿಯ ನಾಯಕ ಪ್ರಣವ್ ಮುಖರ್ಜಿ ಅವರು ನಾಗಪುರದಲ್ಲಿ ಆರೆಸ್ಸೆಸ್ ರಾಷ್ಟ್ರಭಕ್ತರ ಸಂಘಟನೆ ಎಂದು ಹೊಗಳಿದ್ದರು. ಇಂತಹ ಸಂಘಟನೆಯ ಚಡ್ಡಿ ಸುಡಲು ಹೊರಟರೆ ಕಾಂಗ್ರೆಸ್ ನ ಅಧೋಗತಿಗೆ ಕಾರಣವಾಗುತ್ತದೆ. ದಿನದಿಂದ ದಿನಕ್ಕೆ ಕಾಂಗ್ರೆಸ್ ವೋಟು ಮತ್ತಷ್ಟು ಕಡಿಮೆಯಾಗೋದು ಖಚಿತ ಎಂದು ಕೋಟ ಶ್ರೀನಿವಾಸ್ ಪೂಜಾರಿ ಹೇಳಿದರು.

Edited By :
PublicNext

PublicNext

07/06/2022 06:41 pm

Cinque Terre

37.61 K

Cinque Terre

2

ಸಂಬಂಧಿತ ಸುದ್ದಿ