ಕುಂದಾಪುರ :ಬೆಲೆ ಏರಿಕೆಯನ್ನು ಖಂಡಿಸಿ ಸಿಐಟಿಯು ವತಿಯಿಂದ ಕುಂದಾಪುರ ಶಾಸ್ತ್ರೀ ಸರ್ಕಲ್ ಬಳಿ ಪ್ರತಿಭಟನೆ ನಡೆಯಿತು.
ಈ ಸಂದರ್ಭದಲ್ಲಿ ರಿಕ್ಷಾ ಚಾಲಕರ ಮುಖಂಡರಾದ ಚಂದ್ರಶೇಖರ ವಿ ಮಾತನಾಡಿ ಬೆಲೆ ಏರಿಕೆಯಿಂದ ಜನ ಸಾಮಾನ್ಯರು ಜೀವನ ನೆಡೆಸುವುದೇ ಕಷ್ಟವಾಗಿ ಬಿಟ್ಟಿದೆ,2014 ರಲ್ಲಿ ಅಧಿಕಾರಕ್ಕೆ ಬಂದ ಏನ್. ಡಿ. ಎ ಸರ್ಕಾರ ಬೆಲೆ ಏರಿಕೆ ಮಾಡೋಲ್ಲ ಎನ್ನುವ ಸುಳ್ಳು ಭರವಸೆ ನೀಡಿ ಇದೀಗ ಬೆಲೆ ಏರಿಕೆಗೆ ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭ ಸಿಐಟಿಯು ತಾಲೂಕು ಸಂಚಾಲಕರಾದ ಎಚ್ ನರಸಿಂಹ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ಉಪಸ್ಥಿತರಿದ್ದರು.
Kshetra Samachara
20/04/2022 02:31 pm