ಉಡುಪಿ:ಜಾಮಿಯಾ ಮಸೀದಿಗೆ ಒಳಪಟ್ಟ ಕಟ್ಟಡದಲ್ಲಿ ಇದ್ದ ಝಾರ ಹಾಗೂ ಜೈತೂನ್ ಹೋಟೆಲ್ ನ್ನು ತೆರವುಗೊಳಿಸಿ ಕಟ್ಟಡವನ್ನು ನೆಳಸಮಗೊಳಿಸಿದ ಉಡುಪಿ ನಗರಸಭೆಯ ಕಾರ್ಯವನ್ನು SDPI ಉಡುಪಿ ಜಿಲ್ಲಾ ಉಪಾಧ್ಯಕ್ಷರಾದ ಶಾಹಿದ್ ಅಲಿ ಖಂಡಿಸಿದ್ದಾರೆ.
ಉಡುಪಿ ಜಾಮಿಯಾ ಮಸೀದಿಯ ಜಾಗದಲ್ಲಿ ಇದ್ದ ಕಟ್ಟಡವನ್ನ SDPI ಉಡುಪಿ ಜಿಲ್ಲಾಧ್ಯಕ್ಷ ನಝೀರ್ ಅಹ್ಮದ್ ಮತ್ತು ಅವರ ಸಹೋದರ ಬಾಡಿಗೆಗೆ ಪಡೆದು ಹೊಟೇಲ್ ನಡೆಸುತ್ತಿದ್ದರು. ಇತ್ತೀಚೆಗೆ ಉಡುಪಿ ನಗರಸಭೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ಕಟ್ಟಡವನ್ನೂ ಒಳಗೊಂಡಂತೆ 22 ಕಟ್ಟಡಗಳು ಅಕ್ರಮ ಎಂದು ಘೋಷಿಸಿ ತೆರವಿಗೆ ನಿರ್ಣಯ ತೆಗೆದುಕೊಳ್ಳಲಾಗಿತ್ತು.
ಆದರೆ ಈ ಒಂದು ಕಟ್ಟಡವನ್ನು ಬಿಟ್ಟು ಬೇರೆ ಯಾವ ಕಟ್ಟಡದ ವಿರುದ್ಧ ಯಾವುದೇ ರೀತಿಯ ಕಾರ್ಯಾಚರಣೆ ನಡೆಸಿಲ್ಲ ಹಾಗೂ ಇವತ್ತು ನೆಲಸಮ ಗೊಳಿಸಿದ ಕಟ್ಟಡದ ಬದಿಯಲ್ಲೇ ಇರುವ ಒಂದು ಕಟ್ಟಡದ ಮೇಲಿನ ಎರಡು ಮಹಡಿಗಳಿಗೆ ಪರವಾನಿಗೆ ಇರಲಿಲ್ಲ, ಆ ಕಟ್ಟಡಕ್ಕೆ ತರಾತುರಿಯಲ್ಲಿ ಕೆಲವು ದಿನಗಳ ಹಿಂದೆ ಡೋರ್ ನಂಬರ್ ನೀಡಲಾಗಿತ್ತು.
ಒಟ್ಟಾರೆ ರಾಜಕೀಯ ದ್ವೇಷ ಸಾಧಿಸುವ ಉದ್ದೇಶದಿಂದ ಉಡುಪಿ ಶಾಸಕ ರಘುಪತಿ ಭಟ್ ರವರ ಕುಮ್ಮಕ್ಕಿನಿಂದ ಈ ತೆರವು ಕಾರ್ಯ ನಡೆದಿದೆ. ಇದನ್ನು SDPI ಉಡುಪಿ ಜಿಲ್ಲಾ ಸಮಿತಿ ಖಂಡಿಸುತ್ತದೆ ಹಾಗೂ ಇದರ ವಿರುದ್ಧ ಹೋರಾಟವನ್ನು ನಡೆಸಲಿದೆ ಎಂದು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
Kshetra Samachara
26/03/2022 06:18 pm