ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಬಜೆಟ್ ನಲ್ಲಿ ವಿದ್ಯುತ್ ವಲಯಕ್ಕೆ ದೂರದೃಷ್ಟಿಯ ಸ್ಪರ್ಶ: ಸಚಿವ ಸುನಿಲ್ ಕುಮಾರ್

ಉಡುಪಿ : ಕೇಂದ್ರ ಬಜೆಟ್ ಭವಿಷ್ಯದ ಭಾರತಕ್ಕೆ ಪೂರಕವಾದ ನೀತಿ- ನಿರೂಪಕ ಅಂಶಗಳನ್ನು ಹೊಂದಿದ್ದು ಇಂಧನ ಕ್ಷೇತ್ರಕ್ಕೆ ದೂರದೃಷ್ಟಿಯ ಸ್ಪರ್ಶ ನೀಡಿದ್ದಾರೆ ಎಂದು ಕನ್ನಡ ಸಂಸ್ಕ್ರತಿ ಮತ್ತು ಇಂಧನ ಸಚಿವ ವಿ ಸುನಿಲ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ಮುಂದಿನ ೨೫ ವರ್ಷಗಳ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಬಜೆಟ್ ತಯಾರಿಸಲಾಗಿದೆ. ಯಾವುದೇ‌ ಒಂದು ವರ್ಗದ ಓಲೈಕೆಗೆ ಸೀಮಿತವಾಗಿರದೇ ಪಾಲಿಸಿ ಆಧರಿತ ಕಾರ್ಯಕ್ರಮಗಳ ಜಾರಿಗೆ ಕೇಂದ್ರ ಆದ್ಯತೆ ನೀಡಿದೆ. ಎಲ್ಲದಕ್ಕಿಂತ ಹೆಚ್ಚಾಗಿ " ಸ್ವಚ್ಚ ಇಂಧನ" ಕ್ಕೆ ಬಜೆಟ್ ನಲ್ಲಿ ಒತ್ತು ನೀಡಿದ್ದಾರೆ. ಕೇಂದ್ರ ಸರಕಾರದ ಆದ್ಯತಾ ವಲಯದಲ್ಲಿ ಇಂಧನ ಕ್ಷೇತ್ರ ಸೇರಿದ್ದು, ವಿದ್ಯುತ್ ಪ್ರಸರಣ ಮತ್ತು ಆಧುನೀಕರಣಕ್ಕೆ ಒತ್ತು ನೀಡಿದ್ದಾರೆ.

ವಿಶೇಷವಾಗಿ ಹಸಿರು ಶಕ್ತಿ ಮೂಲಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಸುಸ್ಥಿರ ಅಭಿವೃದ್ಧಿಗೆ ಕಡಿಮೆ‌‌ ಇಂಗಾಲ ಬಿಡುಗಡೆ ಮಾಡುವ ಶಕ್ತಿ ಮೂಲಗಳ ಬಳಕೆಗೆ ಅಗತ್ಯ ಎಂದು ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ವಿಶ್ವ ವೇದಿಕೆಯಲ್ಲಿ ಪ್ರತಿಪಾದಿಸಿದ್ದರು.‌ಇದರ ಮುಂದುವರಿದ ಭಾಗವಾಗಿ "ಪಂಚಾಮೃತ " ಕಲ್ಪನೆಯಲ್ಲಿ ಸೋಲಾರ್ ವಿದ್ಯುತ್ ಉತ್ಪಾದನೆಗೆ ಒತ್ತು‌ ನೀಡಿದ್ದಾರೆ. ೨೦೩೦ರ ಹೊತ್ತಿಗೆ ೮ ಗಿಗಾ ಹರ್ಟ್ಸ್ ಸೋಲಾರ್ ವಿದ್ಯುತ್‌ ಉತ್ಪಾದನೆಯ ಮಹತ್ವಾಕಾಂಕ್ಷೆಯನ್ನು ಹೊಂದಿದ್ದು, ಇದಕ್ಕೆ ೧೯೫೦೦ ಕೋಟಿ ರೂ. ಅನುದಾನ ನಿಗದಿ ಮಾಡಿರುವುದು ಅತ್ಯಂತ ಸ್ವಾಗತಾರ್ಹ.‌ಜತೆಗೆ ಎಲೆಕ್ಟ್ರಿಕ ವಾಹನಗಳ ಅಭಿವೃದ್ಧಿಗೂ ಆದ್ಯತೆ ನೀಡಿರುವುದು ಆ ವಲಯದ ಬೆಳವಣಿಗೆಗೆ ಪೂರಕವಾಗಿದೆ.

ಗ್ರೀನ್ ಎನರ್ಜಿಯ ಜತೆಗೆ ಕ್ಲೀನ್ ಎನರ್ಜಿಯ ವಿಚಾರವನ್ನು ಬಜೆಟ್ ಪ್ರಸ್ತಾಪಿಸಲಾಗಿದೆ. ಇದು ವಿದ್ಯುತ್ ಪ್ರಸರಣ ಹಾಗೂ ಸೋರಿಕೆಯ ತಡೆಗೆ ಹೊಸ ಮಾರ್ಗ ತೋರುವುದು ಸ್ಪಷ್ಟ. ಕೇಂದ್ರ ಸರಕಾರ ಈಗಾಗಲೇ ರಾಜ್ಯದ ವಿದ್ಯುದೀಕರಣಕ್ಕೆ ತೆರೆದ ಮನಸಿನಿಂದ ಸಹಕಾರ ನೀಡುತ್ತಿದ್ದು, ಬಜೆಟ್ ವಿಶ್ಲೇಷಣೆ ಸಂದರ್ಭದಲ್ಲಿ ಈ ಬಗ್ಗೆ‌ ಇನ್ನಷ್ಟು ಸ್ಪಷ್ಟತೆ ದೊರಕುತ್ತದೆ.

ಯಾವುದೋ ಒಂದು ರಾಜ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಯೋಜನೆಗಳನ್ನು ಘೋಷಿಸುವ ಪರಂಪರೆಯನ್ನು ಈ ಬಾರಿ ಕೈ ಬಿಡಲಾಗಿದೆ. ದೇಶದ ಸಮಷ್ಠಿ ದೃಷ್ಟಿಕೋನ ಬಜೆಟ್ ನಲ್ಲಿದೆ ಎಂದು ಸುನೀಲ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

Edited By : PublicNext Desk
Kshetra Samachara

Kshetra Samachara

01/02/2022 06:18 pm

Cinque Terre

1.59 K

Cinque Terre

0

ಸಂಬಂಧಿತ ಸುದ್ದಿ