ಉಡುಪಿ: ಉಡುಪಿಯಲ್ಲಿ ಒಮ್ಮೆ ಬಿಡುವು ಮಾಡಿ ಸಂಚಾರ ಮಾಡಿ ನೋಡಿ
ಮಾಜಿ ಸಚಿವ ಪ್ರಮೋದ್ ರ ವಿಶೇಷ ಪ್ರಯತ್ನದಿಂದ ಜಾರಿಗೆ ಬಂದ ಜನೋಪಯೋಗಿ ನರ್ಮ್ ಸರಕಾರಿ ಬಸ್ಸುಗಳು ಬಹುತೇಕ ಮಾಯ ಆಗಿವೆ ,ಖಾಸಗಿ ಬಸ್ಸುಗಳ ದರ ಗಗನಕ್ಕೇರಿವೆ !!
ಉಡುಪಿ ಮಣಿಪಾಲ ರಸ್ತೆಯಲ್ಲಿ ಬೀದಿದೀಪಗಳೇ ಇಲ್ಲ, ಮಣಿಪಾಲದ ಮುಖ್ಯ ರಸ್ತೆ ಕೂಡ ರಾತ್ರಿ ನಂತರ ಕತ್ತಲು, ಮಹಿಳೆಯರ ಸುರಕ್ಷತೆ ಸವಾಲಿನ ವಿಷಯವಾಗಿದೆ.
ಚತುಷ್ಪಥ ಕಾಮಗಾರಿ ತಾವು ಮಾಡಿಸಿ ದಶಕ ಕಳೆದರೂ ಇಂದ್ರಾಳಿ ರೇಲ್ವೆ ಮೇಲಸೇತುವೆ ಅರ್ಧಂಬರ್ಧ ಆಗಿ ಹಾಗೇನೇ ಉಳಿದು ವಾಹನ ಸವಾರರಿಗೆ ಮೃತ್ಯು ಕೂಪವಾಗಿದೆ.
ಪರ್ಕಳ ಮೂಲಕ ಹಾದು ಹೋಗುವ ರಸ್ತೆ ಬದಿ ಕಟ್ಟಡಗಳನ್ನು ಕೆಡವಿ ಹಾಕಲಾಗಿದೆ.ಆದರೆ ಪರಿಹಾರವೂ ಅವರಿಗೆ ಸಿಕ್ಕಿಲ್ಲ ,ಸುಸಜ್ಜಿತ ರಸ್ತೆಯೂ ಸಿಕ್ಕಿಲ್ಲ .ನಿತ್ಯ ನಿರಂತರವಾಗಿ ಅವ್ಯಾಹತವಾಗಿ ಪರವಾನಿಗೆ ಇಲ್ಲದ ,ಜಿಪಿಎಸ್ ಅಳವಡಿಸದ ಮರಳು ಸಾಗಾಟ ವಾಹನಗಳು ಓಡಾಡುತ್ತಿವೆ. ಅಕ್ರಮವಾಗಿ ಮರಳನ್ನು ಮಾರುತ್ತಾ ಇದ್ದಾರೆ, ಪರವಾನಿಗೆ ಪಡೆದ ಲಾರಿಗಳು ವ್ಯಾಪಾರ ಇಲ್ಲದೇ ಬದಿಗೆ ಸರಿದಿವೆ !!
ಹದಿನೈದು ವರ್ಷಗಳಿಂದ ನಿವೇಶನ ಅಧಿಕೃತವಾಗಿ ಕ್ರಯಕ್ಕೆ ಪಡೆದು ತಮ್ಮ ಹೆಸರಿನಲ್ಲಿ ಆರ್ ಟಿಸಿ ಆದರೂ ಏಕನಿವೇಶನ ಮಂಜೂರಾತಿ ಇಲ್ಲ ಎಂಬ ನೆಪವೊಡ್ಡಿ ಅವರ ನಿವೇಶನಗಳು ಪಾಳುಬಿದ್ದಿವೆ.
ತಾವು ಈ ಎಲ್ಲ ವಿಚಾರಗಳಿಗೆ ವಿಶೇಷ ಗಮನ ನೀಡಿ ಉಡುಪಿಯ ಜನತೆಯನ್ನು ಈ ಸಮಸ್ಯೆಗಳಿಂದ ಪಾರು ಮಾಡಬೇಕು ಎಂದು ಕಾಂಗ್ರೆಸ್ ಮುಖಂಡ ಅಮೃತ್ ಶೆಣೈ ಉಡುಪಿ ಶಾಸಕ ಭಟ್ ರವರಲ್ಲಿ ಮನವಿ ಮಾಡಿದ್ದಾರೆ.
Kshetra Samachara
18/12/2021 09:46 pm