ಉಡುಪಿ: ಉಡುಪಿ ನಗರಕ್ಕೆ ಮತ್ತು ಸುತ್ತುವರಿದ 19 ಪಂಚಾಯಿತಿಗಳಿಗೆ ಅಮೃತ್ ಯೋಜನೆಯಡಿ ವಾರಾಹಿಯಿಂದ ಕುಡಿಯುವ ನೀರು ಪೂರೈಸುವ ಯೋಜನೆಯ ಪೈಪ್‌ಲೈನ್ ಕಾಮಗಾರಿ (KUIDFC) ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ಮೂಲಕ ಆರೂರು ಗ್ರಾಪಂ ವ್ಯಾಪ್ತಿಯಲ್ಲಿ ನಡೆಯುತ್ತಿದೆ.
ಕಾಮಗಾರಿಯ ಸ್ಥಿತಿಗತಿ ಬಗ್ಗೆ ಶಾಸಕ ಕೆ. ರಘುಪತಿ ಭಟ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಗುಣಮಟ್ಟ ಕಾಯ್ದುಕೊಂಡು ಶೀಘ್ರ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭ ತಾಪಂ ಸದಸ್ಯರಾದ ನಳಿನಿ ಪ್ರದೀಪ್ ರಾವ್, ಆರೂರು ಗ್ರಾಪಂ ಸದಸ್ಯರಾದ ಗುರುರಾಜ್ ರಾವ್, ಚಂದ್ರಾವತಿ, ಉದಯ ನಾಯ್ಕ, ಮಾಲತಿ, ಆರೂರು ಗ್ರಾಪಂ ಮಾಜಿ ಅಧ್ಯಕ್ಷ ರಾಜೀವ್ ಕುಲಾಲ್, ಮಾಜಿ ಉಪಾಧ್ಯಕ್ಷ ಗಣೇಶ್ ಕುಲಾಲ್, ಕೆ.ಯು.ಐ.ಡಿ.ಎಫ್.ಸಿ. ಸಹಾಯಕ ಕಾರ್ಯಪಾಲಕ ಅಭಿಯಂತರ ಸುದರ್ಶನ್, ಡಿ.ಆರ್.ಎಸ್. ಯೋಜನಾ ವ್ಯವಸ್ಥಾಪಕ ರಮೇಶ್ ಹಾಗೂ ಪಕ್ಷದ ಕಾರ್ಯಕರ್ತರು, ಸ್ಥಳೀಯರು ಉಪಸ್ಥಿತರಿದ್ದರು.
Kshetra Samachara
22/01/2021 08:47 pm