ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿರ್ವ: ಗ್ರಾಪಂ ಚುನಾವಣೆಯನ್ನೂ ಗೆದ್ದ ಜಿಪಂ ಸದಸ್ಯ ವಿಲ್ಸನ್ ರೋಡ್ರಿಗಸ್!

ಕಾಪು: ಶಿರ್ವ ಜಿಪಂ ಸದಸ್ಯ ಕಾಂಗ್ರೆಸ್ ಬೆಂಬಲಿತ ವಿಲ್ಸನ್‌ ರೋಡ್ರಿಗಸ್ ಅವರು ಗ್ರಾಪಂ ಚುನಾವಣೆಯಲ್ಲಿ 5ನೇ ಬಾರಿಗೆ ಗೆಲುವು ಸಾಧಿಸಿದ್ದಾರೆ!

ಶಿರ್ವ ಗ್ರಾಪಂನ 9ನೇ ವಾರ್ಡ್ ನಲ್ಲಿ ಸ್ಪರ್ಧಿಸಿದ್ದ ಅವರು ಪ್ರತಿಸ್ಪರ್ಧಿ ಶೈಲೇಶ್ ವಿರುದ್ಧ 39 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ‌. ಅವರದ್ದೇ ಕ್ಷೇತ್ರದಲ್ಲಿ ಫಾರೂಕ್ ಜಯ ಸಾಧಿಸಿದ್ದಾರೆ. ಎರಡು ಸ್ಥಾನಗಳಿಗೆ ನಡೆದಿದ್ದ ಚುನಾವಣೆಯಲ್ಲಿ 6 ಮಂದಿ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಬಿಜೆಪಿ ಅಭ್ಯರ್ಥಿಗಳು ಮತ್ತು ಕಾಂಗ್ರೆಸ್ ನ ಬಣ ರಾಜಕೀಯದ ಅಭ್ಯರ್ಥಿಗಳು ಇಲ್ಲಿ ಕಣದಲ್ಲಿದ್ದರು.‌

ವಿಲ್ಸನ್ ರೋಡ್ರಿಗಸ್ ಅವರು ಐದನೇ ಬಾರಿಗೆ ಗ್ರಾಪಂ ಚುನಾವಣೆಗೆ ಸ್ಪರ್ಧಿಸುತ್ತಿದ್ದು, ಗೆಲುವಿನ‌ ಮಂದಹಾಸ ಬೀರಿದ್ದಾರೆ. ಹಿಂದಿನ ಬಾರಿ ಗ್ರಾಪಂ ಸದಸ್ಯರಾಗಿದ್ದ ಅವರು, ಜಿಪಂ ಚುನಾವಣೆಗಾಗಿ ಸ್ಥಾನ ತೊರೆದಿದ್ದರು. ಈ ಬಾರಿ ಮತ್ತೆ ಗ್ರಾಪಂ ಚುನಾವಣೆಯಲ್ಲಿ ಸ್ಪರ್ಧಿಸಿದ್ದು ವಿಶೇಷವಾಗಿತ್ತು.

Edited By : Vijay Kumar
Kshetra Samachara

Kshetra Samachara

30/12/2020 07:27 pm

Cinque Terre

8.9 K

Cinque Terre

1

ಸಂಬಂಧಿತ ಸುದ್ದಿ