ಕಾಪು: ಇಲ್ಲಿನ ದಂಡತೀರ್ಥ ಪದವಿ ಪೂರ್ವ ಕಾಲೇಜಿನ ಮತ ಎಣಿಕೆ ಕೇಂದ್ರದಲ್ಲಿ ಕಾಪು ತಾಲೂಕಿನ 16 ಗ್ರಾ.ಪಂ ಗಳ ಚುನಾವಣೆಯ ಮತ ಎಣಿಕೆ ಕಾರ್ಯ ಭರದಿಂದ ಸಾಗುತ್ತಿದೆ.
ಹೆಜಮಾಡಿ,ಬೆಳಪು,ಕುತ್ಯಾರು ಸೇರಿ 10 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಹೆಜಮಾಡಿಯಲ್ಲಿ ಕಾಂಗ್ರೆಸ್ ಬೆಂಬಲಿತ ಸಂಪ,ಕುತ್ಯಾರುವಿನಲ್ಲಿ ಬಿಜೆಪಿ ಬೆಂಬಲಿತ ಗಣೇಶ್ ವಿ. ಶೆಟ್ಟಿ, ಎವುಜಿನ್ ಲೋಬೊ ಹಾಗೂ ಕಾಂಗ್ರೆಸ್ ಬೆಂಬಲಿತ ಸರಿತ,ಶಾಂಭವಿ ಕುಲಾಲ್ , ಬೆಳಪು ಗ್ರಾ.ಪಂ. ನಲ್ಲಿ ಗ್ರಾಮಾಭಿವೃದ್ಧಿ ಸಮಿತಿಯ ದೇವಿಪ್ರಸಾದ್ ಶೆಟ್ಟಿ, ಅನಿತಾ,ಉಷಾ,ರೂಪ, ಶೋಭಾ ಬಿ. ಭಟ್ ಆಯ್ಕೆಯಾಗಿದ್ದಾರೆ.
ಮತ ಎಣಿಕೆ ಕೇಂದ್ರಕ್ಕೆ ಜಿಲ್ಲಾಧಿಕಾರಿ ಜಿ.ಜಗದೀಶ್, ಚುನಾವಣಾ ವೀಕ್ಷಕ ದಿನೇಶ್,ಡಿವೈಎಸ್ಪಿ ಭರತ್ ರೆಡ್ಡಿ ಭೇಟಿ ನೀಡಿದರು. ಮತ ಎಣಿಕೆ ಕೇಂದ್ರದ ಹೊರಭಾಗದಲ್ಲಿ ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿತರು ಜಮಾಯಿಸಿದ್ದಾರೆ.
ಮತ ಎಣಿಕೆ ಕೇಂದ್ರದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ನೋಡಲ್ ಅಧಿಕಾರಿ ಮುಹಮ್ಮದ್ ಇಸಾಖ್ , ತಹಸೀಲ್ದಾರ್ ರಶ್ಮಿ ನೇತೃತ್ವದಲ್ಲಿ ಸಿಬ್ಬಂದಿಎಣಿಕೆ ಕಾರ್ಯಕ್ಕೆ ಸಹಕರಿಸುತ್ತಿದ್ದಾರೆ.
Kshetra Samachara
30/12/2020 10:26 am