ಕಾಪು : ತಾಲೂಕಿನ ಗ್ರಾಮ ಪಂಚಾಯತ್ ಚುನಾವಣೆಯ ಮತ ಎಣಿಕೆಗೆ ದಂಡತೀರ್ಥ ಶಾಲೆಯಲ್ಲಿ ಚಾಲನೆ ದೊರಕಿದೆ.
ಕಾಪು ತಾಲೂಕಿನ 16 ಗ್ರಾಮ ಪಂಚಾಯತ್ ಗಳ 280 ಕ್ಷೇತ್ರಗಳಿಗೆ ಮತದಾನ ನಡೆದಿದ್ದು, 650 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಕಾಪು ತಹಶಿಲ್ದಾರ್ ರಶ್ಮಿ, ಸಿಪಿಐ ಪ್ರಕಾಶ್, ತಾಲೂಕು ಆಡಳಿತ, ಪೊಲೀಸ್ ಇಲಾಖೆ ಸಹಿತ ವಿವಿಧ ಅಧಿಕಾರಿಗಳು ಭದ್ರತಾ ವ್ಯವಸ್ಥೆಯಲ್ಲಿ ತೊಡಗಿದ್ದಾರೆ.
150 ಕ್ಕೂ ಅಧಿಕ ಮಂದಿ ಪೊಲೀಸರು ಭದ್ರತಾ ವ್ಯವಸ್ಥೆ ಯನ್ನು ಕೈಗೆತ್ತಿಕೊಂಡಿದ್ದು, ಪ್ರಥಮ ಹಂತದ ಮತ ಎಣಿಕೆ ಆರಂಭಗೊಂಡಿದೆ.
Kshetra Samachara
30/12/2020 08:45 am