ಕಾರ್ಕಳ : ಅಧಿವೇಶನ ಮುಕ್ತಾಯವಾಗಿದ್ದೇ ಆಗಿದ್ದು ಎಲ್ಲರ ಚಿತ್ತ ಸಚಿವ ಸಂಪುಟ ವಿಸ್ತರಣೆಯ ಮೇಲೆ ನೆಟ್ಟಿದೆ.
ಸಚಿವಾಕಾಂಕ್ಷಿಗಳಲ್ಲಿಯೂ ಸಾಕಷ್ಟು ಯೋಚನೆಗಳು ಶುರುವಾಗಿವೆ ಈ ನಡುವೆ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ರಾಜ್ಯದ ಸಚಿವ ಸಂಪುಟ ಪುನಾರ ರಚನೆ ಆಗುತ್ತದೆಯೋ, ಸಂಪುಟ ಮಂತ್ರಿ ಮಂಡಲದಲ್ಲಿ ಯಾರು ಯಾರು ಇರುತ್ತಾರೆ ಎನ್ನುವುದನ್ನು ಬಿಜೆಪಿ ಹೈಕಮಾಂಡ್ ಗೆ ಬಿಟ್ಟ ತೀರ್ಮಾನ ಎಂದಿದ್ದಾರೆ.
ಸಚಿವ ಸ್ಥಾನ ಬದಲಾವಣೆ ಬಗ್ಗೆ ನಾನೇನು ಹೇಳುವುದಿಲ್ಲ, ಪಕ್ಷ ಕಟ್ಟಿ ಬೆಳೆಸುವಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪರ ಕೊಡುಗೆ ತುಂಬಾ ಇದೆ.
ಹೀಗಾಗಿ ಮುಖ್ಯಮಂತ್ರಿ ಸ್ಥಾನದ ಬದಲಾವಣೆ ಸದ್ಯ ದೂರದ ಮಾತು ಎಂದರು.
ಈ ಮಧ್ಯೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ದೆಹಲಿಗೆ ಹೋಗಿ ಬರುತ್ತೇನೆ ಎಂದಿದ್ದಾರೆ.
Kshetra Samachara
29/09/2020 12:11 pm