ಕಾಂಗ್ರೆಸ್ ಚಡ್ಡಿಯ ಬಗ್ಗೆ ಹಗುರವಾಗಿ ಮಾತನಾಡಿದೆ. ಹೀಗಾಗಿ ಉಡುಪಿಯಲ್ಲೂ ಚಡ್ಡಿಗಳ ಸಂಗ್ರಹವಾಗುತ್ತಿದೆ.ಉಡುಪಿ ಜಿಲ್ಲೆಯಿಂದ ಬೆಂಗಳೂರಿಗೆ ಕೊರಿಯರ್ ನಲ್ಲಿ ಚಡ್ಡಿ ಕಳುಹಿಸುತ್ತೇವೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಆರೆಸ್ಸೆಸ್ ಚಡ್ಡಿಯ ತಾಕತ್ತು ಕಾಂಗ್ರೆಸ್ ಗೆ ಗೊತ್ತಿಲ್ಲ. ಚಡ್ಡಿಯ ವಿಚಾರಕ್ಕೆ ಬಂದರೆ ಕರ್ನಾಟಕದಿಂದಲೇ ಕಾಂಗ್ರೆಸ್ ನ ಅಂತಿಮಯಾತ್ರೆ ಆರಂಭವಾಗುತ್ತೆ. ನಾಳೆ ಸಂಜೆ ಉಡುಪಿ ಜಿಲ್ಲೆಯಿಂದ ಹಳೆಯ ಚಡ್ಡಿಗಳನ್ನು ಕಳುಹಿಸುತ್ತೇವೆ.ನಾವು ಹೊಸ ಚಡ್ಡಿಗಳನ್ನು ಕಾಂಗ್ರೆಸ್ಸಿಗೆ ಕೊಡುವುದಿಲ್ಲ. ಸಿದ್ದರಾಮಯ್ಯ ನಲಪಾಡ್ ಅದನ್ನು ಸುಡಲಿ. ಕೊನೆಗೊಂದು ದಿನ ಅವರಿಗೆ ಚಡ್ಡಿ ಹಾಕಲು ಗತಿ ಇರೋದಿಲ್ಲ ,ಅದು ಗ್ಯಾರಂಟಿ.ನಾವು ಆರೆಸ್ಸೆಸ್ ನ ಖಾಕಿ ಚಡ್ಡಿ ಕಳುಹಿಸುವುದಿಲ್ಲ.ನಮ್ಮ ಜನ ಬಳಸದೆ ಇರುವ ಚಡ್ಡಿಗಳನ್ನು ಕಳಿಸ್ತೇವೆ. ಬಳಸಲು ಯೋಗ್ಯ ಇಲ್ಲದ ಚಡ್ಡಿಗಳನ್ನು ಕಳಿಸುತ್ತೇವೆ ಎಂದು ಹೇಳಿದ್ದಾರೆ.
PublicNext
08/06/2022 12:24 pm